ಬೆಂಗಳೂರು:ನಕಲಿ ನೋಟು ಚಲಾವಣೆ ಜಾಲ ಮತ್ತೆ ನಗದಲ್ಲಿ ತಲೆ ಎತ್ತಿದೆ. ಜೆರಾಕ್ಸ್ ಮಾಡಿದ ₹100 ಮುಖಬೆಲೆಯ ನೋಟು ನೀಡಿ ಕಿಡಿಗೇಡಿಗಳು ವಂಚಿಸುತ್ತಿದ್ದಾರೆ.
ಬೆಂಗಳೂರಲ್ಲಿ ನಕಲಿ ನೋಟು ಚಲಾವಣೆ ಜಾಲ ಪಶ್ಚಿಮ ವಿಭಾಗದ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಹೋಟೆಲ್, ಬೀಡಾ ಅಂಗಡಿ, ಜನರಲ್ ಸ್ಟೋರ್ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳನ್ನು ಟಾರ್ಗೆಟ್ ಮಾಡಿರುವ ಖದೀಮರು, ಜೆರಾಕ್ಸ್ ಮಾಡಿದ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾರೆ.
ಹೊರಗಿನಿಂದ ಬಂದು ಲಾಡ್ಜ್ನಲ್ಲಿ ಉಳಿದುಕೊಂಡವರಿಂದ ಈ ಕೃತ್ಯ ನಡೆಯುತ್ತಿರುವ ಶಂಕೆಯಿದ್ದು, ಹೆಚ್ಚು ಜನರಿರುವ ಸಮಯ ನೋಡಿ ಕೃತ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತಂತೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಅಂಗಡಿ ಮಾಲೀಕರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಲಹಂಕದಲ್ಲಿ BEO ಗುಂಡು ಹಾರಿಸಿಕೊಂಡು ಆತ್ಮಹತ್ಯೆ