ಬೆಂಗಳೂರು:ಅಸಲಿ ನೋಟಿನ ತಲೆ ಮೇಲೆ ಹೊಡೆದ ಹಾಗೇ ನಕಲಿ ಅಂದರೆ ಕಳ್ಳ ನೋಟ್ ಪ್ರಿಂಟ್ ಮಾಡುತ್ತಿದ್ದ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಲರ್ ಪ್ರಿಂಟರ್, ಹಣ ಹಾಗೂ ಕೆಮಿಕಲ್ಅನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ನೋಟು ತಯಾರಿಸಲು ಬ್ಲ್ಯಾಕ್ ಪೇಪರ್ ಅಯೋಡಿನ್ ಹಾಗೂ ಬೇರೆ ಕೆಮಿಕಲ್ ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳ ಬಳಿ ಇದ್ದ ಸುಮಾರು ಒಂದು ಕೋಟಿ ಮೌಲ್ಯದ ನಕಲಿ ಭಾರತೀಯ ಹಾಗೂ ವಿದೇಶಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಒಂದು ಅಸಲಿ ನೋಟ್ಗೆ ನಾಲ್ಕು ನಕಲಿ ನೋಟು ನೀಡಿ ಜನರನ್ನು ಯಾಮಾರಿಸುತ್ತಿದ್ದರು.