ಬೆಂಗಳೂರು : 2019ರ ಮೇ ಯಲ್ಲಿ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಕಲಿ ನೋಟ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ NIA ವಿಶೇಷ ನ್ಯಾಯಲಯಕ್ಕೆ ಹೆಚ್ಚುವರಿ ಚಾರ್ಚ್ ಶೀಟ್ ಸಲ್ಲಿಕೆಯಾಗಿದೆ.
ಈ ಬಗ್ಗೆ ಮುಂಬೈ NIA ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ಮಹಾರಾಷ್ಟ್ರ ಮೂಲದ ಜೆಸಿಮ್, ಕರ್ನಾಟಕ ಗೌರಿಬಿದನೂರು ಮೂಲದ ಇಸಾಕ್ ಖಾನ್, ರಾಧಕೃಷ್ಣ ಆರೋಪಿಗಳನ್ನು NIA ಬಂಧಿಸಿತ್ತು. ಬಂಧಿತರ ಬಳಿ 82 ಸಾವಿರ ಮೌಲ್ಯದ ನಕಲಿ ನೋಟ್ಗಳನ್ನು ಜಪ್ತಿ ಕೂಡ ಮಾಡಿಲಾಗಿತ್ತು.