ಕರ್ನಾಟಕ

karnataka

By

Published : Apr 28, 2019, 9:26 AM IST

ETV Bharat / state

ಗೃಹ ಸಚಿವರ ಲೆಟರ್ ಹೆಡ್ ನಕಲು ಆರೋಪ: ಮಾಜಿ ಪತ್ರಕರ್ತ ಮೂರು ದಿನ ಕಸ್ಟಡಿಗೆ

ಗೃಹ ಸಚಿವರ ಲೆಟರ್ ಹೆಡ್ ನಕಲು ಮಾಡಿದ ಆರೋಪದಡಿ ಮಾಜಿ ಪತ್ರಕರ್ತ ಹೇಮಂತ್ ಕುಮಾರ್​ನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

ಗೃಹ ಸಚಿವರ ಲೆಡರ್ ಹೆಡ್ ನಕಲು ಆರೋಪ

ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣದಡಿ ಸಿಐಡಿ ಪೋಲಿಸರಿಂದ ಬಂಧಿತನಾಗಿದ್ದ ಮಾಜಿ ಪತ್ರಕರ್ತ ಹೇಮಂತ್ ಕುಮಾರ್​ನನ್ನು 8ನೇ ಎಸಿಎಂಎಂ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ ಸಂಬಂಧ ಎಂ.ಬಿ.ಪಾಟೀಲ್ ಅವರ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣದಡಿ ಪೋಸ್ಟ್ ಕಾರ್ಡ್ ಪತ್ರಿಕೆಯ ಸಂಪಾದಕ ವಿಕ್ರಂ ಹೆಗ್ಡೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು‌.‌ ಈತ ನೀಡಿದ ಮಾಹಿತಿ ಮೇರೆಗೆ ಮಾಜಿ ಪತ್ರಕರ್ತ ಹೇಮಂತ್ ಕುಮಾರ್​ನನ್ನು ಸಿಐಡಿ ಪೊಲೀಸರು ಬಂಧಿಸಿ ನಿನ್ನೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇಂದು ಆರೋಪಿಯ ತಂದೆ ಕಾರ್ಯ ಇರುವುದರಿಂದ ಇಂದು ಬೆಳಗ್ಗೆ 11.30ರಿಂದ 2.30ವರೆಗೆ ಪೊಲೀಸರ ಸಮ್ಮುಖದಲ್ಲಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಅನುಮತಿ ನೀಡಿದೆ.

For All Latest Updates

TAGGED:

ABOUT THE AUTHOR

...view details