ಬೆಂಗಳೂರು: ಸೈಬರ್ ಕ್ರೈಂ ವಂಚಕರು ಇಷ್ಟು ದಿನಗಳ ಕಾಲ ಹಣ ವಸೂಲಿ ಮಾಡಲು ಸಾಮಾನ್ಯ ಜನರನ್ನ ಟಾರ್ಗೆಟ್ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಜನರ ಬಳಿ ಹಣ ವಸೂಲಿ ಮಾಡಿ ಮೋಸ ಮಾಡುತ್ತಿದ್ದರು. ಆ ನಂತರ ಈ ಸೈಬರ್ ವಂಚಕರು IPS, IAS ಅಧಿಕಾರಿಗಳ ಹೆಸರಿನಲ್ಲಿ ದುಡ್ಡು ಕೀಳಲಾರಂಭಿಸಿದ್ದರು. ಆದರೆ ಇದೀಗ ಸಚಿವರ ಸೈಬರ್ ಕ್ರೈಂ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚಕರು ಹಣ ಕೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಚಿವರ ಪಿಎ ಚೇತನ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.