ಕರ್ನಾಟಕ

karnataka

ETV Bharat / state

ಸಿಬಿಐ ಅಧಿಕಾರಿ ಎಂದು ಹೇಳಿ ಹಣ ಪೀಕುತ್ತಿದ್ದವನ ಅಸಲಿಯತ್ತು ಬಯಲು: ಎರಡು ಬೆಂಜ್​ ಕಾರು ವಶಕ್ಕೆ - ಬೆಂಗಳೂರು ಸಿಸಿಬಿ ಪೊಲೀಸರಿಂದ ನಕಲಿ ಸಿಬಿಐ ಅಧಿಕಾರಿ ಬಂಧನ

ಮಹಾನಗರ ಸಿಸಿಬಿ ಪೊಲೀಸರಿಂದು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಪ್ರತಿಷ್ಠಿತ ಶ್ರೀಮಂತ ವ್ಯಕ್ತಿಗಳಿಂದ ಹಣ ಪೀಕುತ್ತಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಶ್ರೀಮಂತರಿಂದ ಹಣ ವಸೂಲಿ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ನಕಲಿ ಪೊಲೀಸಪ್ಪನ ಬಂಧನ

By

Published : Nov 22, 2019, 12:11 PM IST

ಬೆಂಗಳೂರು: ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಶ್ರೀಮಂತ ವ್ಯಕ್ತಿಗಳಿಂದ ಹಣ ಪೀಕುತ್ತಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಬಂಧಿಸುವಲ್ಲಿ ಸಿಲಿಕಾನ್​ ಸಿಟಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಭಿಲಾಷ್(34) ಬಂಧಿತ ಆರೋಪಿ. ಈತ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸವಿದ್ದು, ಶ್ರೀಮಂತ‌ ವ್ಯಕ್ತಿಗಳನ್ನೇ ಟಾರ್ಗೆಟ್ ‌ಮಾಡಿಕೊಂಡು ಅವರ ಹಿನ್ನೆಲೆ ಕಲೆ ಹಾಕುತ್ತಿದ್ದ. ನಂತರ ನಾನು ಸಿಬಿಐ ಎಕಾನಾಮಿಕ್ ಇನ್ ವೆಸ್ಟಿಗೇಷನ್​​ ಆಫೀಸರ್, ನಿಮ್ಮ ಮೇಲೆ ದಾಳಿ ಮಾಡುತ್ತೇನೆ ಎಂದು ಹೆದರಿಸಿ, ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ.

ಇತ್ತೀಚೆಗೆ ದೇವನಹಳ್ಳಿಯ ನಿವಾಸಿವೋರ್ವನನ್ನು ಹೋಟೆಲ್​ಗೆ ಕರೆಯಿಸಿಕೊಂಡು ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದ. ನಂತರ ಅವರ ಹಿನ್ನೆಲೆ ಕಲೆ ಹಾಕಿ 24 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಈ ವಿಚಾರ ತಿಳಿದ ಸಿಸಿಬಿ ಡಿಸಿಪಿ ರವಿ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಸದ್ಯ ನಕಲಿ ಅಧಿಕಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಪದವಿ ಮುಗಿಸಿ ಶೋಕಿ ಜೀವನ ನಡೆಸಲು ಅಡ್ಡ ದಾರಿ ಹಿಡಿದಿದ್ದ ಅನ್ನೋದು ತಿಳಿದುಬಂದಿದೆ. ಆರೋಪಿಯಿಂದ ಎರಡು ಬೆಂಜ್​ ಕಾರನ್ನು ಜಪ್ತಿ ಮಾಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

For All Latest Updates

TAGGED:

ABOUT THE AUTHOR

...view details