ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಖಾನೆಗಳು ಬಾಗಿಲು ಮುಚ್ಚಿವೆ, ಕಾರ್ಖಾನೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಪಕರಣಗಳು 21 ದಿನಗಳಿಂದ ಕಾರ್ಯನಿರ್ವಹಿಸದ ಕಾರಣ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಕರ್ನಾಟಕ ಸಣ್ಣ ಮಧ್ಯಮ ಕೈಗಾರಿಕೆ ಸಂಘದ ಅಧ್ಯಕ್ಷ ರಾಜು ಆತಂಕ ವ್ಯಕ್ತಪಡಿಸಿದರು.
ಯಂತ್ರಗಳು ದುಸ್ಥಿತಿಗೆ ಹೋಗುವ ಭೀತಿಯಲ್ಲಿ ಕಾರ್ಖಾನೆ ಮಾಲೀಕರು 21 ದಿನ ಸಿ ಎನ್ ಸಿ (CNC) ಯಂತ್ರಗಳಿಗೆ ಸಮಯಕ್ಕೆ ಸರಿಯಾಗಿ ನಯಗೊಳಿಸುವಿಕೆ ಆಗದಿದ್ದರೆ ಯಂತ್ರಗಳು ಕೆಡುತ್ತವೆ. ಸೋಶಿಯಲ್ ಡಿಸ್ಟನ್ಸ್ ಕಾಪಾಡಿಕೊಂಡು ನಾವು ಕೆಲಸ ಪ್ರಾರಂಭಿಸಿದರೆ ನಾವು ನಮ್ಮ ಸಾಲ, ವಿದ್ಯುತ್ ದರ ಸೇರಿದಂತೆ ಮತ್ತಿತರೆ ಖರ್ಚನ್ನು ನಿರ್ವಹಣೆ ಮಾಡುವುದಕ್ಕೆ ಸುಲಭವಾಗುತ್ತದೆ ಎಂದು ತಿಳಿಸಿದರು.
ಇದರ ಜೊತೆಗೆ ನಮಗೆ ಯಂತ್ರೋಪಕರಣಗಳ ಸರ್ವಿಸ್ ನೀಡುವುದಕ್ಕೆ ತಂತ್ರಜ್ಞರು ಈ ಸಂದರ್ಭದಲ್ಲಿ ಸಿಗುವುದು ಅಸಾಧ್ಯ, ತಂತ್ರಜ್ಞರು ಅವರ ಊರಿಗೆ ಹೋಗಿದ್ದಾರೆ ಅಥವಾ ಅವರು ದೂರದಿಂದ ಕಾರ್ಖಾನೆಗಳಿಗೆ ಬರಲು ಸಾಧ್ಯವಿಲ್ಲ. ಹಾಗೂ ಯಂತ್ರಕ್ಕೆ ಬೇಕಾದ ಉಪಕರಣ ದೊರಕುವುದು ಕಷ್ಟವಾಗಿದೆ.
ಕರ್ನಾಟಕ ಸಣ್ಣ ಕೈಗಾರಿಕಾ ಸಂಘ, ದೇಶದಲ್ಲಿ ಇರುವ ಲಾಕ್ ಡೌನ್ ಗೆ ಪೂರ್ಣ ಬೆಂಬಲ ನೀಡಿದೆ, ಆದರೆ ಕೈಗಾರಿಕೆಗಳಿಗೆ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಸಣ್ಣ ಕೈಗಾರಿಗೇಕೆಗಳಲ್ಲಿ 5 ರಿಂದ 10 ಜನ ಕೆಲಸ ಮಾಡಲಾಗುತ್ತದೆ, ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬಹುದು ಎಂದು ಆರ್.ರಾಜು ಅಭಿಪ್ರಾಯಪಟ್ಟರು.