ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಹದ್ದಿನ ಕಣ್ಣಿನ ಹಾಗೆ ಕೆಲಸ ನಿರ್ವಹಣೆ ಮಾಡುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯದ ಚಹರೆ ವೀಕ್ಷಣೆಯನ್ನ ನಗರ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ನಲ್ಲಿ ಮಾಡಲಾಗುತ್ತದೆ. ಇಲ್ಲಿ ಅನಾಮಿಕ ವ್ಯಕ್ತಿಗಳ ಮಾಹಿತಿ, ನಿಯಮ ಉಲ್ಲಂಘನೆ ಮಾಡುವ ವಾಹನಗಳ ನಂಬರ್ ಪ್ಲೇಟ್ಗಳ ಮಾಹಿತಿ ಅಥವಾ ಪೊಲೀಸರ ಜೊತೆ ಅಸಭ್ಯ ವರ್ತನೆ, ಸರಗಳ್ಳತನ, ರೌಡಿಗಳ ಅಟ್ಟಹಾಸ, ಅಥವಾ ಪ್ರಮುಖ ಸ್ಥಳಗಳಾದ ವಿಧಾನಸೌಧ, ಹೈಕೋರ್ಟ್ ಹೀಗೆ ನಾನಾ ಪ್ರದೇಶಗಳ ದೃಶ್ಯಾವಳಿವೀಕ್ಷಣೆ ಮಾಡಲಾಗುತ್ತದೆ.
ಹೀಗಾಗಿ, ಈ ಕಮಾಂಡ್ ಸೆಂಟರ್ ಅನ್ನೋದು ಬಹಳ ಸೂಕ್ಷ್ಮ ಸ್ಥಳವಾದ ಕಾರಣ ಕಮಾಂಡ್ ಸೆಂಟರ್ನ ಡಿಸಿಪಿಯವರು ಭದ್ರತೆ ದೃಷ್ಟಿಯಿಂದ ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಾಗಬಾರದೆಂಬ ಉದ್ದೇಶ ಮುಂದಿಟ್ಟುಕೊಂಡು ಫೇಸ್ ರೆಕಗ್ನೈಜ್ ಬಯೋಮೆಟ್ರಿಕ್ ಅಳವಡಿಕೆ ಮಾಡಿದ್ದಾರೆ. ಇದರಿಂದ ಕಮಾಂಡ್ ಸೆಂಟರ್ಗೆ ಡಿಸಿಪಿ ಹಾಗೂ ಸಿಬ್ಬಂದಿಯನ್ನ ಬಿಟ್ರೆ ಬೇರೆ ಯಾರೂ ಕೂಡ ಒಳಗಡೆ ಎಂಟ್ರಿ ಕೊಡಲು ಅವಕಾಶವಿಲ್ಲ. ಇತ್ತೀಚೆಗೆ ನಡೆದ ಬಹಳಷ್ಟು ಗಲಭೆ ಪ್ರಕರಣ, ಹಾಗೆ ಕೆಲವು ಕೊಲೆ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚಲು ಕಮಾಂಡ್ ಸೆಂಟರ್ನಲ್ಲಿ ಸೆರೆಯಾದ ದೃಶ್ಯಾವಳಿ ಬಹಳ ಸಹಕಾರಿಯಾಗಿತ್ತು. ಹೀಗಾಗಿ, ಸದ್ಯ ಭದ್ರತಾ ದೃಷ್ಟಿಯಿಂದ ಇದನ್ನ ಅಳವಡಿಸಲಾಗಿದೆ. ಇನ್ನು ಕಮಾಂಡ್ ಸೆಂಟರ್ನಲ್ಲಿ ಕೆಲಸ ನಿರ್ವಹಣೆ ಮಾಡುವ ಸಿಬ್ಬಂದಿ ಓರ್ವರು ಈ ಫೇಸ್ ರೆಕಗ್ನೈಜ್ ಹೇಗೆ ಕಾರ್ಯನಿರ್ವಹಣೆ ಮಾಡ್ತಿದೆ ಎಂದು ತೋರಿಸಿದ್ದಾರೆ.
ಇದರ ಬಗ್ಗೆ ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂಥ್ ಮಾತನಾಡಿ, ನಗರದಲ್ಲಿನ ಪ್ರತಿಯೊಂದು ಸೂಕ್ಷ್ಮ ಪ್ರದೇಶವನ್ನ ವೀಕ್ಷಣೆ ಮಾಡುವ ಕೇಂದ್ರ ಕಮಾಂಡ್ ಸೆಂಟರ್. ಇಲ್ಲಿ ದಿನದ 24 ಗಂಟೆ ಮೂರು ಶಿಫ್ಟ್ನಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸ್ತಾರೆ. ಹೀಗಾಗಿ, ಫೇಸ್ ರೆಕಗ್ನೈಸ್ ಮಷಿನ್ ಅನ್ನು ಕೊರಿಯಾದಿಂದ ತರಿಸಲಾಗಿದೆ .
ಕಮಾಂಡ್ ಸೆಂಟರ್ ಬಹಳ ಸೆನ್ಸಿಟಿವ್ ಆದ ಕಾರಣ ಇದನ್ನ ಎಂಟ್ರೆನ್ಸ್ನಲ್ಲಿ ಅಳವಡಿಸಲಾಗಿದೆ. ಯಾರೇ ಅಪರಿಚಿತ ವ್ಯಕ್ತಿಗಳು ಏಕಾಏಕಿ ಹೋಗಿ ಕೆಲ ಪ್ರಮುಖ ದೃಶ್ಯಾವಳಿ ಅಳಿಸಬಾರದು ಹಾಗೆ ಕದ್ದೊಯ್ಯಬಾರದೆಂಬ ಕಾರಣಕ್ಕೆ ಇದನ್ನು ಅಳವಡಿಕೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಪ್ರಮುಖ ಸೂಕ್ಷ್ಮ ಕಚೇರಿಗಳಲ್ಲಿ ಇದನ್ನು ಅಳವಡಿಕೆ ಮಾಡಲಾಗುವುದು ಎಂದಿದ್ದಾರೆ.