ಕರ್ನಾಟಕ

karnataka

ETV Bharat / state

ಕಣ್ಣಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಬಾಲಕ ಸಾವು: ವೈದ್ಯರ ಮೇಲೆ ಆರೋಪ - ಬೆಂಗಳೂರಿನ ಕಣ್ಣಿನ ಆಸ್ಪತ್ರೆ

ಬೆಂಗಳೂರಿನ ಹೆಸರಘಟ್ಟ ರಸ್ತೆಯ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನಿನ್ನೆ (ಡಿ.14) ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗದ ತಮಿಳುನಾಡು ಮೂಲದ ಬಾಲಕ ಶಂಕರ್​ ಮೃತಪಟ್ಟಿದ್ದಾನೆ. ಆಸ್ಪತ್ರೆ ವೈದ್ಯರೆ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.

eye surgery treated boy died in bangalore
ಮೃತ ಬಾಲಕ ಶಂಕರ್​

By

Published : Dec 15, 2019, 8:00 AM IST

Updated : Dec 15, 2019, 10:06 AM IST

ಬೆಂಗಳೂರು: ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಹೆಸರಘಟ್ಟ ರಸ್ತೆಯ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನಡೆದಿದೆ.

ಮೃತ ಬಾಲಕ ಶಂಕರ್​​

ತಮಿಳುನಾಡಿನ ಧರ್ಮಪುರಿ ಮೂಲದ ಸೆಲ್ವರಾಜ್ ಹಾಗೂ ಶುಭ ದಂಪತಿ ಪುತ್ರ ಶಂಕರ್(6) ಮೃತ ಬಾಲಕ. ಬಲಗಣ್ಣಿನ ರೆಟಿನಾದಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಶಂಕರ್ ನನ್ನ ಮಂಜುನಾಥ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು‌.

ನಿನ್ನೆ (ಡಿ.14) ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿಸಿ, ವಾರ್ಡ್​ಗೆ ದಾಖಲಿಸುವ ವೇಳೆ ಉಸಿರಾಟದ ತೊಂದರೆಯಿಂದ ಮಗು ಸಾವನ್ನಪ್ಪಿದ್ದಾನೆ ಎಂದು ವೈದ್ಯ ಮಂಜುನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ‌.

ಅತಿಯಾದ ಅನಾಸ್ತೇಶಿಯಾದಿಂದ ಬಾಲಕ ಸಾವನಪ್ಪಿದ್ದಾನೆ ಎಂದು ಹೇಳಲಾಗಿದೆ. ಬಾಲಕನ ಸಾವಿಗೆ ವೈದ್ಯರೇ ಕಾರಣ ಎಂದು ಪಾಲಕರು ದೂರಿದ್ದಾರೆ. ಹೀಗಾಗಿ ವೈದ್ಯ ಡಾ.ಮಂಜುನಾಥ್ ನನ್ನ ಬಾಗಲಗುಂಟೆ ಪೋಲಿಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Last Updated : Dec 15, 2019, 10:06 AM IST

ABOUT THE AUTHOR

...view details