ಬೆಂಗಳೂರು :ಜಲಮಂಡಳಿ ಇತ್ತೀಚೆಗೆ ಅನಧಿಕೃತ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕಗಳ ಪರಿಶೀಲನೆ ನಡೆಸಿ, ಸಂಪರ್ಕಗಳನ್ನು ಕಡಿತಗೊಳಿಸಿದೆ. ಹಲವಾರು ಕಟ್ಟಡ ಮಾಲೀಕರು ಅನಧಿಕೃತ ಸಂಪರ್ಕ ಅಧಿಕೃತಗೊಳಿಸಲು ಇನ್ನು ಕೂಡ ಆನ್ಲೈನ್ ಅರ್ಜಿ ಸಲ್ಲಿಸಿಲ್ಲ.
ಪ್ರೋರೇಟಾ ಶುಲ್ಕಕ್ಕೆ ಒಳಪಡುವ ಕಟ್ಟಡಗಳನ್ನು ಹೊರತುಪಡಿಸಿ ಬೇರೆ ಕಟ್ಟಡಗಳಿಗೆ ಯಾವುದೇ ದಂಡ ಇಲ್ಲದೆ ಮಂಡಳಿಯಿಂದ ಕೂಡಲೇ ಸಂಪರ್ಕ ನೀಡಲಾಗುವುದು.