ಬೆಂಗಳೂರು: ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಮೇ 16ರವರೆಗೆ ನೀಡಲಾಗಿದ್ದ ರಜೆಯನ್ನು ಜೂ.6ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಜೂನ್ 6 ರವರೆಗೆ ಕೋರ್ಟ್ಗಳಿಗೆ ರಜೆ ವಿಸ್ತರಣೆ: ಹೈಕೋರ್ಟ್ ಆದೇಶ - ಜೂನ್ 6 ರವರೆಗೆ ಕೋರ್ಟ್ ಗಳಿಗೆ ರಜೆ ವಿಸ್ತರಣೆ
ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಮೇ 16ರವರೆಗೆ ನೀಡಲಾಗಿದ್ದ ರಜೆಯನ್ನು ಜೂ.6ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
![ಜೂನ್ 6 ರವರೆಗೆ ಕೋರ್ಟ್ಗಳಿಗೆ ರಜೆ ವಿಸ್ತರಣೆ: ಹೈಕೋರ್ಟ್ ಆದೇಶ High Court order](https://etvbharatimages.akamaized.net/etvbharat/prod-images/768-512-7214689-637-7214689-1589556279559.jpg)
ಜೂನ್ 6 ರವರೆಗೆ ಕೋರ್ಟ್ಗಳಿಗೆ ರಜೆ ವಿಸ್ತರಣೆ : ಹೈಕೋರ್ಟ್ ಆದೇಶ
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟಾರ್ ಜನರಲ್ ರಾಜೇಂದ್ರ ಬದಾಮಿಕರ್ ಅವರು ಶುಕ್ರವಾರ ಸಂಜೆ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಅದರಂತೆ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡದ ಸಂಚಾರಿ ಪೀಠಗಳು ಸೇರಿದಂತೆ ಎಲ್ಲ ಜಿಲ್ಲಾ, ವಿಚಾರಣಾ, ಕೌಟುಂಬಿಕ, ಕಾರ್ಮಿಕ ನ್ಯಾಯಾಲಯಗಳು ಮತ್ತು ಕೈಗಾರಿಕಾ ನ್ಯಾಯಧಿಕರಣಗಳಿಗೆ ಜೂ.6ರವರೆಗೆ ರಜೆ ಇರಲಿದೆ.