ಬೆಂಗಳೂರು:ಪ್ರಥಮ ಮತ್ತು ದ್ವಿತೀಯ ಪಿಯುಸಿ 2020-21 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ ವಿಸ್ತರಿಸಲಾಗಿದೆ.
ಪ್ರಥಮ-ದ್ವಿತೀಯ ಪಿಯುಸಿ ದಾಖಲಾತಿ ಹಿಂದೆ ಡಿಸೆಂಬರ್ 24 ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಪೋಷಕರ ಮನವಿ ಮೇರೆಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ದಾಖಲಾತಿ ಹಾಗೂ ಕಾಲೇಜು ಬದಲಾವಣೆಯನ್ನು 2021ರ ಜನವರಿ 08 ರವರೆಗೆ ವಿಸ್ತರಿಸಲಾಗಿದೆ. ದಾಖಲಾತಿ ಶುಲ್ಕವನ್ನು ಮರು ದಿನ ಕಡ್ಡಾಯವಾಗಿ ಪಾವತಿಸಬೇಕು.
ಓದಿ: ಪ್ರಥಮ-ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ
ಇನ್ನು ಎಲ್ಲ ಪ್ರಾಂಶುಪಾಲರು ಕಾಲೇಜಿನ ಸೂಚನಾ ಫಲಕದಲ್ಲಿ ಈ ಮಾಹಿತಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ. ಹಾಗೂ ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೆ ಸೂಕ್ತ ವಿಧಾನದಿಂದ ತಿಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಹಾಗೇ 2020-21ನೇ ಸಾಲಿಗೆ ಸಂಬಂಧಿಸಿದಂತೆ, ಪ್ರಥಮ ಮತ್ತು ದ್ವಿತೀಯ ಪಿಯುಸಿ ದಾಖಲಾತಿ ಹಾಗೂ ಕಾಲೇಜು ಬದಲಾವಣೆ ಪ್ರಕ್ರಿಯೆ ಅವಧಿಯನ್ನು, ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲಾಗುವುದಿಲ್ಲ. ಈ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನದಟ್ಟು ಮಾಡಲು ಪ್ರಾಂಶುಪಾಲರಿಗೆ ಸೂಚಿಸಿದೆ.