ಬೆಂಗಳೂರು:ವಾಟ್ಸಪ್ಗೆ ಕೋಡ್ ಮೂಲಕ ಬರುವ ಕರೆಯನ್ನು ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ ನಿಮ್ಮ ಮೊಬೈಲ್ ಫೋನ್‌ಗಳು ಹ್ಯಾಕ್ ಆಗುವ ಸಂಭವವಿದೆ. ಈ ಮೂಲಕ ನಿಮ್ಮೆಲ್ಲಾ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭೀತಿಯಿದ್ದು ಈ ಕೂಡಲೇ ಆ್ಯಪ್ ಅಪ್‌ಗ್ರೇಡ್ ಮಾಡಿ ಎಂದು ಸೂಚನೆ ನೀಡಲಾಗಿದೆ.
ವಾಟ್ಸಪ್ ಸಂಸ್ಥೆ ತುರ್ತಾಗಿ ಅಪ್‌ಗ್ರೇಡ್ ಆವೃತ್ತಿಯನ್ನು ಕೂಡ ಬಿಡುಗಡೆಗೊಳಿಸಿದೆ.ಹಾಗೆಯೇ ಆ್ಯಪ್ ಅಪ್‌ಗ್ರೇಡ್ ಮಾಡಿಕೊಳ್ಳುವಂತೆಯೂ ಬಳಕೆದಾರರಿಗೂ ತುರ್ತು ಕರೆ ನೀಡಿದೆ.
ಈ ಹ್ಯಾಕ್ ವಿಚಾರದ ಬಗ್ಗೆ ಸೈಬರ್ ಎಕ್ಸ್ಪರ್ಟ್ ಸಂತೋಷ್ ಮಾತನಾಡಿ, ನಿಮ್ಮ ವಾಟ್ಸಪ್ಗೆ ಯಾರಾದರೂ ಒಂದು ಪೋಟೋ, ವಿಡಿಯೋ ಅಥವಾ ಲಿಂಕ್ನ್ನು ಕಳಿಸಿದ್ದಾಗ ಅದನ್ನು ನೀವು ಡೌನ್ಲೋಡ್ ಮಾಡಿದರೆ ನಿಮ್ಮ ಮೊಬೈಲ್ನಲ್ಲಿ ಮ್ಯಾನ್ವೇರ್ ಇಲ್ಲವೇ ಸ್ಪೈವೇರ್ ಎಂಬ ಅಪ್ಲಿಕೇಷನ್ ಡೌನ್ಲೋಡ್ ಆಗುತ್ತೆ. ಡೌನ್ಲೋಡ್ ಆದ ನಂತರ ನಿಮ್ಮ ಫೋನ್ನ ಕಂಪ್ಲೀಟ್ ಆಕ್ಸಸ್ ನಿಮಗೆ ಯಾರು ಫೋಟೋ, ವಿಡಿಯೋ ಅಥವಾ ಲಿಂಕ್ ಕಳಿಸಿದ್ದರೋ ಅವರಿಗೆ ಸಿಗುತ್ತವೆ. ಈ ಸಂದರ್ಭದಲ್ಲಿ ನಿಮಗೆ ಪೋಟೋ, ವಿಡಿಯೋ ಅಥವಾ ಲಿಂಕ್ ಕಳುಹಿಸಿದವರಿಗೆ ನಿಮ್ಮ ಕಾಂಟಾಕ್ಟ್ ಡಿಟೇಲ್ಸ್, ಎಸ್ಎಂಎಸ್, ವಾಟ್ಸಪ್ ಡಿಟೇಲ್ಸ್, ವಾಟ್ಸಪ್ ಕಾಲ್ಸ್, ಫೋನ್ನ ಗ್ಯಾಲರಿ, ನೀವು ಬಳಸುವ ಆ್ಯಪ್ಗಳ ಡಿಟೇಲ್ಸ್ ಎಲ್ಲವೂ ಅವರಿಗೆ ಸಿಗುತ್ತವೆ ಎಂದು ಹೇಳುತ್ತಾರೆ.