ಕರ್ನಾಟಕ

karnataka

ETV Bharat / state

ಎಚ್ಚರಿಕೆಯಿಂದಿರಿ..ಒಮಿಕ್ರಾನ್​ ಜನವರಿಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ, ರಾಜ್ಯದ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಆತಂಕ - ಬದಲಾಗುತ್ತಿರುವ ಕೊರೊನಾ ವೈರಸ್​ ಬಗ್ಗೆ ತಜ್ಞರ ಮಾಹಿತಿ

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕು ನಿಧಾನವಾಗಿ ದೇಶದ ವಿವಿಧ ಭಾಗಗಳಲ್ಲಿ ಏರಿಕೆ ಕಾಣುತ್ತಿದೆ. ಇದರ ಜೊತೆಗೆ ತನ್ನ ರೂಪವನ್ನು ಬದಲಾಯಿಸುತ್ತಿದೆ. ಈ ಕುರಿತಂತೆ ತಜ್ಞರು ಸಲಹೆ ನೀಡಿದ್ದು, ಒಮಿಕ್ರಾನ್​ ಕೇಸ್​ಗಳು ಜನವರಿ ಅಂತ್ಯದಲ್ಲಿ ಹೆಚ್ಚಳವಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Expert advice on changing Omicron
ಬದಲಾಗುತ್ತಿರುವ ಒಮಿಕ್ರಾನ್​ ಬಗ್ಗೆ ತಜ್ಞರು ಮಾತು

By

Published : Dec 24, 2021, 4:27 PM IST

Updated : Dec 24, 2021, 5:18 PM IST

ಬೆಂಗಳೂರು: ಕೊರೊನಾ ವೈರಸ್​​​ನ ತಳಿಗಳು ಹೊಸ ಹೊಸ ರೂಪ ಪಡೆದು ಜನರ ಮೇಲೆ ದಾಳಿ ನಡೆಸುತ್ತಿವೆ. ಕಳೆದೊಂದು ವಾರದಿಂದ ಒಮಿಕ್ರಾನ್ ಪ್ರಕರಣಗಳು ಹೆಚ್ಚಳದಿಂದ ಸೋಂಕು ಸಮುದಾಯ ಮಟ್ಟದಲ್ಲಿ ಹಬ್ಬಿರುವ ಸಾಧ್ಯತೆ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಜನವರಿ ಕೊನೆ ವಾರದಲ್ಲಿ ವೈರಸ್​ ಹರಡುವ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬದಲಾಗುತ್ತಿರುವ ಒಮಿಕ್ರಾನ್​ ಬಗ್ಗೆ ತಜ್ಞರು ಮಾತು

ಮೊದ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್​​ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ರೋಗದ ತೀವ್ರತೆ ಮೈಲ್ಡ್ ಆಗಿ ಇದೆ. ಆದರೆ, ಯುಕೆ, ಬ್ರಿಟನ್​​​​​​​​​ನಲ್ಲಿ ಸೋಂಕು ಹರಡುವಿಕೆಯ ತೀವ್ರತೆಯೂ ಹೆಚ್ಚು ವರದಿಯಾಗಿದೆ. ಭಾರತದಲ್ಲಿ ಸೋಂಕು ನಿಧಾನವಾಗಿ ಆವರಿಸುತ್ತಿದ್ದು, ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳು 31ಕ್ಕೆ ಏರಿಕೆ ಕಂಡಿದೆ. ಇದು ಜನವರಿ ಅಂತ್ಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಅದರ ತೀವ್ರತೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸುದರ್ಶನ್ ಬಲ್ಲಾಳ್, ಈ ಹಿಂದೆ ನವೆಂಬರ್​​ನಲ್ಲೇ ಮೂರನೇ ಅಲೆ ಬರುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಡಿಸೆಂಬರ್​ ಆದರೂ ಕೇಸ್​ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿ ಜನವರಿ, ಫೆಬ್ರವರಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದ ಅಂದಾಜಿಸಲಾಗಿದೆ. ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಒಮಿಕ್ರಾನ್ ತೀವ್ರತೆ ಕುರಿತು ಮಾತಾನಾಡಿದ ತಜ್ಞ ವೈದ್ಯ ಡಾ.ಅಶ್ವಿನ್ ಕುಲಕುರ್ಣಿ, ಕೊರೊನಾ ವೈರಸ್​​ಗೆ ಹೋಲಿಕೆ ಮಾಡಿದರೆ ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತೆ ಆದರೆ, ಎಷ್ಟು ತೀವ್ರತೆ ಇರಲಿದೆ ಎಂಬುದಕ್ಕೆ ಇನ್ನು ಯಾವುದೇ ಪುರಾವೆ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಹೆಚ್ಚಳ ಇದ್ದರೂ ರೋಗದ ತೀವ್ರತೆ ಮೈಲ್ಡ್ ಆಗಿ ಇದೆ. ಆದರೆ ಯುಕೆ ಸೇರಿದಂತೆ ಬೇರೆ ದೇಶಗಳಲ್ಲಿ ನೋಡಿದರೆ ರೋಗದ ತೀವ್ರತೆ ಹೆಚ್ಚಿರುವ ವರದಿಯಾಗಿದೆ ಎಂದರು.

ಕೊರೊನಾ ಮೊದಲೆರಡು ಅಲೆಯಷ್ಟು ಒಮಿಕ್ರಾನ್ ಪರಿಣಾಮ ಇರುತ್ತೆ, ಇರೋಲ್ಲ ಎಂಬುದಕ್ಕಿಂತ ನಾವು ಎಚ್ಚರಿಕೆಯಿಂದ ಇರುವುದು ಮುಖ್ಯ. ಒಮಿಕ್ರಾನ್ ಹಲವು ದೇಶಗಳಲ್ಲಿ ವ್ಯತಿರಿಕ್ತವಾಗಿ ವರ್ತಿಸಿದೆ. ಹೀಗಾಗಿ ನಿರ್ಲಕ್ಷಿಸದೇ ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವುದು ಅನಿವಾರ್ಯ ಎಂದರು.

ಇದನ್ನೂ ಓದಿ : ಕಳ್ಳರನ್ನು ಹಿಡಿಯಬೇಕಾದ ಪೊಲೀಸಪ್ಪನೇ ಇಲ್ಲಿ ವಿಲನ್: ಬೈಕ್ ಕಳ್ಳತನ ಮಾಡಿಸುತ್ತಿದ್ದ ಕಾನ್ಸ್​​ಟೇಬಲ್​​​​ ಬಂಧನ

Last Updated : Dec 24, 2021, 5:18 PM IST

For All Latest Updates

ABOUT THE AUTHOR

...view details