ಬೆಂಗಳೂರು:ವರ್ಷಪೂರ್ತಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಮೊದಲೆರಡು ತ್ರೈಮಾಸಿಕದಲ್ಲಿ ಬೆಂಗಳೂರು ನಗರಕ್ಕೆ ಕಳಪೆ ರ‍್ಯಾಂಕ್ ದೊರೆತಿದೆ. ಆದರೆ ಕಡೆಯ ತ್ರೈಮಾಸಿಕದಲ್ಲಿ, ಅತಿ ಹೆಚ್ಚು ಅಂಕಗಳಿಗೆ ಅಭಿಯಾನ ನಡೆಯಲಿದ್ದು, ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಿಮ ರ್ಯಾಂಕಿಂಗ್
ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ : ಬೀದಿಗಿಳಿದು ಸ್ವಚ್ಛತೆಯ ಕಾರ್ಯಾಚರಣೆಗೆ ಅಣಿಯಾದ ಅಧಿಕಾರಿಗಳು ದೇಶದ ಎಲ್ಲ ನಗರಗಳ ಪೈಕಿ ಮೊದಲನೇ ತ್ರೈಮಾಸಿಕ ಅಂದರೆ ಏಪ್ರಿಲ್ನಿಂದ ಜೂನ್ವರೆಗೆ 2768ನೇ ರ‍್ಯಾಂಕ್ ಗಳಿಸಿದ್ರೆ, ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟೆಂಬರ್ವರೆಗೆ 910ನೇ ರ‍್ಯಾಂಕ್ ಬಂದಿದೆ. ಕರ್ನಾಟಕದ ನಗರಗಳ ಪೈಕಿ ಮೊದಲನೇ ತ್ರೈಮಾಸಿಕದಲ್ಲಿ 62 ನೇ ಸ್ಥಾನ ಹಾಗೂ ಎರಡನೇ ತ್ರೈಮಾಸಿಕದಲ್ಲಿ 24 ನೇ ಸ್ಥಾನ ಪಡೆದಿದೆ.
ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತರಾದ ರಂದೀಪ್, ಲೀಗ್ ಸಿಸ್ಟಂ ಅಂತ ಕಳೆದ ವರ್ಷದಿಂದ ಆರಂಭವಾಗಿದೆ. ಮೊದಲ ಎರಡು ತ್ರೈಮಾಸಿಕದ ಫಲಿತಾಂಶ ನಿನ್ನೆ ಸಂಜೆ ಬಿಡುಗಡೆ ಮಾಡಿದ್ದಾರೆ. ಒಟ್ಟು ಆರು ಸಾವಿರ ಅಂಕದಲ್ಲಿ ಕೇವಲ ಮುನ್ನೂರು ಅಂಕಕ್ಕೆ ಸೀಮಿತವಾಗಿ ಅಂಕ ನೀಡಿದ್ದಾರೆ. ಸೆಪ್ಟೆಂಬರ್ನಿಂದ ಬಿಬಿಎಂಪಿ ಕೆಲಸ ಶುರುಮಾಡಿದ್ದು, ತ್ರೈಮಾಸಿಕ
ರ‍್ಯಾಂಕಿಂಗ್
ಗೆ ಉತ್ತಮ ಕೆಲಸ ಮಾಡಿದ್ದೇವೆ. ಸುಮಾರು 15,000 ಅಂಕಗಳಿದ್ದು, ಇದಕ್ಕಾಗಿ ಬೇಕಾದ ದತ್ತಾಂಶ ಕ್ರೋಢೀಕರಣ ಕಳಿಸಿ ಕೊಟ್ಟಿದ್ದೇವೆಂದರು.
ಜನವರಿ ನಾಲ್ಕರಿಂದ 31ರ ವರೆಗೆ ಪಾಲಿಕೆಗೆ ಹೇಳದೇ ಕೇಂದ್ರ ಸರ್ಕಾರದ ತಂಡ ನಗರಕ್ಕೆ ಭೇಟಿ ನೀಡಲಿದೆ. ಮಾರುಕಟ್ಟೆ, ರಸ್ತೆಗಳನ್ನು ನೋಡುತ್ತಾರೆ, ಜನರ ಜೊತೆ ಅಭಿಪ್ರಾಯ ಸಂಗ್ರಹಿಸುತ್ತಾರೆ. ಜನರ ಅಭಿಪ್ರಾಯದಿಂದ ಎರಡು ಸಾವಿರ ಅಂಕಗಳು ಬರಲಿವೆ. ಮುಂದಿನ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಇದ್ದು, ಇದಕ್ಕೆ ಜನರ ಸಹಕಾರವೂ ಬೇಕಿದೆ. ಪ್ರತೀ ದಿನ ನಾನೂ ಸೇರಿದಂತೆ ಅಧಿಕಾರಿಗಳು ರೌಂಡ್ಸ್ ಹೋಗ್ತೇವೆ ಎಂದರು.