ಕರ್ನಾಟಕ

karnataka

By

Published : Mar 4, 2020, 7:54 PM IST

ETV Bharat / state

ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ: ರೋಚಕ ಮಾಹಿತಿ ಬಯಲಿಗೆಳೆಯುತ್ತಿದೆ ಸಿಸಿಬಿ

ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಯುತ್ತಿರುವ ಸಿಸಿಬಿ ಪೊಲೀಸರು ರೋಚಕ ಮಾಹಿತಿಯನ್ನು ಹೊರಗೆಳೆಯುತ್ತಿದ್ದಾರೆ.

Don Ravi Poojari
ಡಾನ್ ರವಿ ಪೂಜಾರಿ

ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿಯ ಇಂಚಿಂಚು ಮಾಹಿತಿ ಕೆದಕುತ್ತಿರುವ ಸಿಸಿಬಿ ಪೊಲೀಸರು ಸದ್ಯ 47 ಹಳೆಯ ಪ್ರಕರಣದ ದೂರುದಾರರನ್ನು ಸಂಪರ್ಕಿಸಿ ಹೇಳಿಕೆ‌ ದಾಖಲಿಸುತ್ತಿದ್ದಾರೆ.

ಮತ್ತೊಂದೆಡೆ‌ ಸಿಸಿಬಿ ಅಧಿಕಾರಿಗಳು‌ ಬೆದರಿಕೆ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಕರೆ ಬಂದ ನಂಬರ್ ತೋರಿಸಿ ಇದು ಯಾರ ನಂಬರ್ ಎಂದು ಕೇಳಿದ್ದಾರೆ. ಈ ವೇಳೆ ಆರೋಪಿ ನಾನೇ ಕರೆ ಮಾಡಿದ್ದೂ ಇರಬಹುದು, ಮಾಡದೆನೂ ಇರಬಹುದು. ಆದ್ರೆ ನನಗೆ ಸದ್ಯದ ಮಟ್ಟಿಗೆ ಕೆಲವು ವಿಚಾರಗಳು ನೆನಪಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾನೆ. ಹೀಗಾಗಿ ಸಿಸಿಬಿ ಪೊಲೀಸರು ರವಿ ಪೂಜಾರಿಗೆ ಬೆದರಿಕೆ ಕರೆಗಳ ಕುರಿತು ರಿಕಾಲ್ ಮಾಡುವಂತೆ ಸೂಚಿಸಿದ್ದಾರೆ.

ಮತ್ತೊಂದೆಡೆ, ಪೊಲೀಸರ ವಿಚಾರಣೆ ವೇಳೆ ಕುತೂಹಲಕಾರಿ ವಿಷಯಗಳನ್ನೂ ಆತ ಬಾಯ್ಬಿಟ್ಟಿದ್ದಾನೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ 2001ರಲ್ಲಿ ಸುಬ್ಬರಾಜು ಎಂಬಾತನ್ನು ರವಿ ಗ್ಯಾಂಗ್ ಹತ್ಯೆ ಮಾಡಿತ್ತು. ಈ ವಿಚಾರದ ತನಿಖೆ ನಡೆಸಿದಾಗ ಮಾಜಿ ಡಾನ್ ಒಬ್ಬ ಸುಬ್ಬರಾಜುಗೆ ಬೆದರಿಕೆ ಮಾಡಲು ಹೇಳಿದ್ದರು. ಹೀಗಾಗಿ ನಾನು ನನ್ನ ಸಹಚರರಿಗೆ ಸೂಚಿಸಿದೆ ಎಂದಿದ್ದಾನೆ.

ರವಿ ಪೂಜಾರಿಯನ್ನು ಸೆನೆಗಲ್ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದು ಹೀಗೆ..

ಇನ್ನು ಈ ಪ್ರಕರಣವೂ ಸೇರಿ ಹಲವು ಪ್ರಕರಣಗಳಲ್ಲಿ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಕರ್ನಾಟಕ ಪೊಲೀಸರು ನಿರ್ಧಾರ ಮಾಡಿದ್ದರು. ಕರ್ನಾಟಕ ಪೊಲೀಸರು ವಶಕ್ಕೆ ಪಡೆಯುವ ಮೊದಲು ರವಿ ಪೂಜಾರಿ ಒಂದು ವರ್ಷ ಎರಡು ತಿಂಗಳು ಸೆನಗಲ್ ದೇಶದ ಜೈಲಿನಲ್ಲಿದ್ದ. ಜೈಲಿನಲ್ಲಿದ್ದಾಗ ಕರ್ನಾಟಕ ಪೊಲೀಸರು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯುತ್ತಾರೆ ಅನ್ನುವ ಮಾಹಿತಿ ಆತನಿಗೆ ಸಿಗುತ್ತೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಡ ಆತ ನನ್ನನ್ನು ಭಾರತಕ್ಕೆ ಕಳುಹಿಸಬೇಡಿ ಎಂದು ಸೆನೆಗಲ್ ಪೊಲೀಸರಿಗೆ ಮನವಿ ಮಾಡಿದ್ದ. ಈ ವೇಳೆ ಸೆನೆಗಲ್ ಪೊಲೀಸರು ಪೂಜಾರಿಯನ್ನು ಹಸ್ತಾಂತರ ಮಾಡಲು ಹೊಸ ಪ್ಲಾನ್ ಮಾಡಿ ಸೆನೆಗಲ್‌ನಿಂದ ಮತ್ತೊಂದು ಜೈಲಿಗೆ ಶಿಫ್ಟ್ ಮಾಡುವುದಾಗಿ ನಂಬಿಸಿ‌ ಸೆನೆಗಲ್‌ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲು ನಿರ್ಧರಿಸ್ತಾರೆ. ಮತ್ತೆ ತನ್ನ ಬುದ್ದಿ ಮುಂದುವರೆಸಿ ತನ್ನ ವಕೀಲರನ್ನು ಭೇಟಿಯಾಗದೆ ನಾನು ಎಲ್ಲಿಯೂ ಬರಲ್ಲ ಎಂದಿದ್ದು, ಈ ವೇಳೆ ಹೊಸ ಜೈಲಿಗೆ ಶಿಫ್ಟ್ ಎಂದು ಪುಸಲಾಯಿಸಿ ರಾಜ್ಯ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ಡಾನ್ ಚಾರ್ಮ್ ಬೆಳೆಸಿಕೊಂಡಿದ್ದ ಪೂಜಾರಿ ವಿದೇಶದಲ್ಲಿ ದೊಡ್ಡ ಬ್ಯುಸಿನೆಸ್ ಮನ್:

ಸೆನೆಗಲ್ ಪೊಲೀಸರ ಬಂಧನಕ್ಕೊಳಗಾಗುವ ಮುನ್ನ ರವಿ ಪೂಜಾರಿ ವಿದೇಶದಲ್ಲಿ ದೊಡ್ಡ ಬ್ಯುಸಿನೆಸ್ ಮೆನ್ ಆಗಿದ್ದ. ಡಾನ್ ಚಾರ್ಮ್ ಬೆಳೆಸಿಕೊಂಡಿದ್ದ ಪೂಜಾರಿ ವಿದೇಶದಲ್ಲಿ ಭಾರತೀಯ ಬ್ಯುಸಿನೆಸ್ ಮೆನ್​ಗಳ ಜೊತೆ ಓಡಾಡಿಕೊಂಡಿದ್ದ. ಬುರ್ಕಿನೊ‌ ಪಾಸೋ ದೇಶದಲ್ಲಿ ಹೋಟೆಲ್ ಉದ್ಯಮದಲ್ಲೂ ಹೆಸರು ಮಾಡಿ, ಮಹರಾಜ ಮತ್ತು ನಮಸ್ತೆ ಇಂಡಿಯಾ ಅನ್ನುವ ಹೆಸರಿನಲ್ಲಿ ಹೋಟೆಲ್​ ತೆರೆದಿದ್ದ. ಭಾರತೀಯರು ಇಲ್ಲೇ ಬರ್ತಿದ್ದು, ಉದ್ಯಮ ಚೆನ್ನಾಗಿಯೇ ನಡೆಯುತ್ತಿತ್ತು. ಆದ್ರೆ ಯಾರೂ ಕೂಡ ರವಿ ಪುಜಾರಿಯನ್ನು ಗುರುತು ಹಿಡಿಯಲು ಆಗಿರಲಿಲ್ಲ ಅನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ABOUT THE AUTHOR

...view details