ಕರ್ನಾಟಕ

karnataka

ETV Bharat / state

ಬಡವರಿಗೆ ದಿನಸಿ ಕಿಟ್​ ವಿತರಿಸಿ ಮಾನವೀಯತೆ ಮೆರೆದ ಅಬಕಾರಿ ಪೊಲೀಸ್​

ಸುಮಾರು 500 ಬಡ ಕುಟುಂಬಗಳಿಗೆ ಬೆಂಗಳೂರು ಪೂರ್ವ ವೈಟ್ ಫೀಲ್ಡ್ ವಲಯ ಅಬಕಾರಿ ಪೊಲೀಸ್​ ಅಧಿಕಾರಿ ದಿನಸಿ ಕಿಟ್​ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

grocery kit
ದಿನಸಿ ಕಿಟ್​ ವಿತರಣೆ

By

Published : Apr 11, 2020, 1:05 PM IST

ಬೆಂಗಳೂರು:ಬೆಂಗಳೂರು ಪೂರ್ವ ವೈಟ್ ಫೀಲ್ಡ್ ವಲಯ ಅಬಕಾರಿ ಪೊಲೀಸ್​ ಅಧಿಕಾರಿಯಾಗಿರುವ ನಾರಾಯಣ ತಿರುಮಲಪುರ ಡಿಜೆಸಿಎಂ ಸಮಾಜ ಸೇವಾ ಟ್ರಸ್ಟ್ ವತಿಯಿಂದ ದಿನಗೂಲಿ ನೌಕರರು ಹಾಗೂ ಬಡವರಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದ್ದಾರೆ.

ಕೊರೊನಾ ಭೀತಿಯಿಂದ ಇಡೀ ದೇಶ ಬಂದ್ ಆಗಿದ್ದು, ಕೆಲಸ ಇಲ್ಲದೇ ಮನೆಯಲ್ಲಿ ಇರುವ ಬಡವರು ಹಸಿವಿನಿಂದ ನರಳ ಬಾರದು ಎಂದು ಮಾವೀಯತೆ ದೃಷ್ಠಿಯಿಂದ ಅಬಕಾರಿ ಅಧಿಕಾರಿ ಅಗತ್ಯ ವಸ್ತುಗಳ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಡವರಿಗೆ ದಿನಸಿ ಕಿಟ್​ ವಿತರಣೆ

ಬೆಂಗಳೂರಿನ ಕೋಣನಕುಂಟೆ ಸುತ್ತ ಮುತ್ತ ಗುಡಿಸಲಿನಲ್ಲಿ ವಾಸವಿರುವ ಸುಮಾರು 300 ನಿರ್ಗತಿಕ ಕುಟುಂಬಗಳಿಗೆ ಹಾಗೂ ಲಟ್ಟಿ ಗೊಲ್ಲಹಳ್ಳಿ 100 ಬಡ ಕುಟುಂಬಗಳಿಗೆ ಮತ್ತು ದಾಸರಹಳ್ಳಿಯಲ್ಲಿ ಇರುವ 100 ತೃತೀಯ ಲಿಂಗಿಗಳ ಕುಟುಂಬಗಳಿಗೆ ಮತ್ತು ಬೆಂಗಳೂರು ಸುತ್ತ ಮುತ್ತ ಸುಮಾರು ನಿರ್ಗತಿಕರಿಗೆ 10 ದಿನಗಳಿಗೆ ಆಗುವಷ್ಟು ಪಡಿತರ ಕಿಟ್​ಗಳನ್ನು ವಿತರಿಸಿದ್ದಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸರ್ಕಾರಿ ಸೇವೆ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡಿ ಗಮನ‌ಸೆಳೆದಿರುವ ಅಬಕಾರಿ ಇನ್ಸ್ ಪೆಕ್ಟರ್ ಇತರರಿಗೆ ಮಾದರಿಯಾಗಿದ್ದಾರೆ.

ABOUT THE AUTHOR

...view details