ಅಬಕಾರಿ, ತೋಟಗಾರಿಕೆ ಇಲಾಖೆಯಲ್ಲಿ ಗ್ರೂಪ್ ಬಿ, ಸಿ ಸಿಬ್ಬಂದಿ ವರ್ಗಾವಣೆ
ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸಮೂಹದ ಅಧಿಕಾರಿಗಳು ಮತ್ತು ಸಿಬ್ಬಂದಿಯ (ಜೇಷ್ಠತಾ ಘಟಕದಲ್ಲಿ) ಒಟ್ಟು ವೃಂದ ಬಲದ ಶೇ.6ರಷ್ಟು ಸಿಬ್ಬಂದಿ ವರ್ಗಾವಣೆ ಮಾಡಲು ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು: ಅಬಕಾರಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಗ್ರೂಪ್ ಬಿ ಮತ್ತು ಸಿ ವೃಂದದ ಸಿಬ್ಬಂದಿಯನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸಮೂಹದ ಅಧಿಕಾರಿಗಳು ಮತ್ತು ಸಿಬ್ಬಂದಿಯ (ಜೇಷ್ಠತಾ ಘಟಕದಲ್ಲಿ) ಒಟ್ಟು ವೃಂದ ಬಲದ ಶೇ.6ರಷ್ಟು ಸಿಬ್ಬಂದಿ ವರ್ಗಾವಣೆ ಮಾಡಲು ಅನುಮತಿ ನೀಡಿದೆ. ಜೊತೆಗೆ ಈ ವರ್ಗಾವಣೆಯ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೆ ನೀಡಲಾಗಿತ್ತು. ಅದರಂತೆ ಸಚಿವರುಗಳ ಅನುಮೋದನೆಯೊಂದಿಗೆ ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಅಬಕಾರಿ ಇಲಾಖೆ : ಅಬಕಾರಿ ಇಲಾಖೆಯಲ್ಲಿ ಒಟ್ಟು 112 ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾಯಿಸಲಾಗಿದೆ. ಈ ಪೈಕಿ 7 ಮಂದಿ ಅಬಕಾರಿ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು 25, ಅಬಕಾರಿ ಉಪನಿರೀಕ್ಷಕರು 25, ಕಚೇರಿ ಅಧೀಕ್ಷರು 2, ಪ್ರಥಮ ದರ್ಜೆ ಸಹಾಯಕರು 15, ಶೀಘ್ರ ಲಿಪಿಗಾರರು 3, ದ್ವಿತೀಯ ದರ್ಜೆ ಸಹಾಯಕರು 18 ಮತ್ತು 17 ವಾಹನ ಚಾಲಕರನ್ನು ವರ್ಗಾಯಿಸಲಾಗಿದೆ.
ತೋಟಗಾರಿಕೆ ಇಲಾಖೆ : ಇತ್ತ ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು 139 ಗ್ರೂಪ್ ಬಿ ಮತ್ತು ಸಿ ವೃಂದದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಟ್ಟು 25 ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ವರ್ಗಾಯಿಸಲಾಗಿದೆ. ಸಹಾಯಕ ತೋಟಗಾರಿಕೆ ಅಧಿಕಾರಿ 45, ತೋಟಗಾರಿಕೆ ಸಹಾಯಕರು 38, ವ್ಯವಸ್ಥಾಪಕರು 1, ಅಧೀಕ್ಷಕರು 12, ಪ್ರಥಮ ದರ್ಜೆ ಸಹಾಯಕರು 10 ಮತ್ತು 3 ಮಂದಿ ದ್ವಿತೀಯ ದರ್ಜೆ ಸಹಾಯಕರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.