ಬೆಂಗಳೂರು:ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು, ಜನಪರ, ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಆರು ದಶಕಗಳಿಂದ ಸುದೀರ್ಘ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾರತದ ಪ್ರಧಾನಿಯಾಗಿ ಇಂದಿಗೆ 25 ವರ್ಷ ಆಗಲಿದೆ.
ಪ್ರಧಾನಿ ಹುದ್ದೆ ಕೇವಲ ಉತ್ತರ ಭಾರತದವರಿಗೆ ಸೀಮಿತ ಎಂಬಂತಿದ್ದ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿ ಮೊದಲ ಕನ್ನಡಿಗರೆಂಬ ಪ್ರಶಂಸೆಗೆ ದೇವೇಗೌಡರು ಪಾತ್ರರಾಗಿದ್ದಾರೆ. ಹೆಚ್.ಡಿ.ದೇವೇಗೌಡರು 1996, ಜೂನ್ 1 ರಂದು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದಕ್ಷಿಣ ಭಾರತದ ಅದರಲ್ಲೂ ಕನ್ನಡಿಗರಾದ ದೇವೇಗೌಡರು, ತೃತೀಯರಂಗ ಸರ್ಕಾರದ ನೇತೃತ್ವ ವಹಿಸಿ 11 ತಿಂಗಳು ಅಧಿಕಾರ ನಡೆಸಿದರು.
ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆದಾಗ ಕುರ್ಚಿಗಾಗಿ ಅಂಟಿಕೊಳ್ಳದೇ, ಪ್ರಧಾನಿ ಹುದ್ದೆ ಬಿಟ್ಟು ಬಂದವರು. ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಅವಕಾಶವಿದ್ದರೂ ತತ್ವ ಸಿದ್ದಾಂತಕ್ಕೆ ಬದ್ಧರಾಗಿ ಬಿಜೆಪಿ ಬೆಂಬಲವನ್ನು ನಿರಾಕರಿಸಿದ್ದವರು ಗೌಡರು. ಆಕಸ್ಮಿಕವಾಗಿ ಪ್ರಧಾನಿಯಾದರೂ ಎಂಬ ಮಾತಿದ್ದರೂ ಅವರ ಸುದೀರ್ಘ ಹೋರಾಟದ ಫಲ ಮಾತ್ರವಲ್ಲದೇ, ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾಡಿದ್ದ ಅಭಿವೃದ್ಧಿಪರ ಕಾರ್ಯಗಳು ಪ್ರಧಾನಿಯಾಗುವಂತೆ ಮಾಡಿದವು ಎಂದರೆ ತಪ್ಪಾಗಲಾರದು.
ಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಂದರೆ 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾದಳ 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದಿದ್ದಾಗ ತೃತೀಯರಂಗ ಅಸ್ಥಿತ್ವಕ್ಕೆ ಬಂದು ಅದರ ನೇತೃತ್ವವನ್ನು ದೇವೇಗೌಡರು ವಹಿಸಿಕೊಳ್ಳುವಂತಾಯಿತು. ಕಾಂಗ್ರೆಸ್ ತೃತೀಯರಂಗ ಸರ್ಕಾರಕ್ಕೆ ಬೆಂಬಲ ನೀಡಿತ್ತು.
ಸದಾ ರೈತಪರ ಕಾಳಜಿ ಹೊಂದಿದ್ದ ಗೌಡರು ಪ್ರಧಾನಿಯಾಗಿ ರಾಷ್ಟ್ರದಲ್ಲಿ ತ್ವರಿತ ನೀರಾವರಿ ಯೋಜನೆಯನ್ನು ಜಾರಿಗೆ ತಂದರು. ರೈತ ಕುಟುಂಬದಿಂದ ಬಂದವರು, ಹಿಂದಿ ಭಾಷೆ ಗೊತ್ತಿಲ್ಲ ಎಂಬ ಟೀಕೆಗಳಿಗೆ ತಮ್ಮ ಆಡಳಿತದ ಮೂಲಕವೇ ಉತ್ತರ ಕೊಟ್ಟರು. ಇದುವರೆಗೂ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಗೌಡರೇ ಆಗಿದ್ದಾರೆ.
ದಶಕಗಳ ಕಾಲ ಜನಪರ, ರೈತಪರ, ಕಾವೇರಿ ನದಿ ನೀರಿಗಾಗಿ , ಗಡಿ ವಿಚಾರ, ಕನ್ನಡ ಭಾಷೆಯ ಸ್ಥಾನಮಾನಕ್ಕೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದ ಗೌಡರು, ಅಧಿಕಾರ ಇರಲಿ ಇಲ್ಲದಿರಲಿ ರೈತಪರ ಹೋರಾಟ ಮಾಡುತ್ತಲೇ ಬಂದವರು. ರಾಜಕೀಯವಾಗಿ ಹಲವು ಸೋಲು ಗೆಲುವು ಕಂಡವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋತರು, ಅವರ ಹೋರಾಟದ ಛಲ ಮಾತ್ರ ಮಂಕಾಗಲಿಲ್ಲ. ಆದರೆ, ರಾಜ್ಯ ಸಭಾ ಸದಸ್ಯರಾಗಿ ಅವರು ಇತ್ತೀಚೆಗೆ ಮಾಡಿದ ಭಾಷಣ ಜನ ಮೆಚ್ಚುವಂತದ್ದು.
ಇನ್ನು ಗೌಡರ ಹುಟ್ಟು ಹಿನ್ನೆಲೆ ಹೇಳುವುದಾರೆ, ಹೆಚ್.ಡಿ.ದೇವೇಗೌಡರು 1933, ಮೇ 18 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿರುವ ಗೌಡರು, 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು.
ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು.
ರಾಜಕೀಯ ಪ್ರವೇಶಿಸಿದ್ದು ಹೇಗೆ :ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಹೆಸರಾಗಿದ್ದರು. ನಂತರ ಇವರು ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸುವ ಆಶಯದೊಂದಿಗೆ ಸದಾ ಆದರ್ಶ ರಾಜ್ಯವೊಂದರ ಕನಸು ಕಾಣುತ್ತಿದ್ದರು.
ಕೇವಲ 28 ವರ್ಷಗಳಿದ್ದಾಗ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ 1962ರಲ್ಲಿ ಕರ್ನಾಟಕ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಇವರು ಯಶಸ್ಸಿನ ಓಟದಲ್ಲೇ ಮುಂದುವರೆದರು. ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಕಾರರಾದ ಇವರು ತಮ್ಮ ಹಿರಿಯರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ಅಂದರೆ 1967-71, 1972-77 ಹಾಗೂ 1978-83 ರಲ್ಲಿ ವಿಧಾನಸಭೆಗಳಿಗೆ ಚುನಾಯಿತರಾದರು.
ಇವರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರು ನವೆಂಬರ್ 22, 1982ರಂದು ಆರನೇ ವಿಧಾನಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿ ಸಚಿವರಾಗಿದ್ದ ಅವರ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಸ್ವಾತಂತ್ರ್ಯ ಮತ್ತು ಸಮಾನತೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಅವರು, ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಂಡರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಜೊತೆ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ದೃಢ ವ್ಯಕ್ತಿಯಾಗಿ ಹೊರ ಹೊಮ್ಮಿದರು.
1991 ಸಂಸತ್ಗೆ ಆಯ್ಕೆ: