ಕರ್ನಾಟಕ

karnataka

ETV Bharat / state

ರಾಜ್ಯಸಭೆ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ದೊಡ್ಡ ಗೌಡ್ರು

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಬಯಸಿ ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಒಟ್ಟು 4 ನಾಲ್ಕು ಸೆಟ್ ನಾಮಪತ್ರಗಳನ್ನು ಅವರು ಸಲ್ಲಿಸಿದ್ದಾರೆ.

ex-pm-hd-deve-gowda-file-nomination-to-rajya-sabha-election
ರಾಜ್ಯಸಭೆ ಚುನಾವಣೆ; ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದ ದೊಡ್ಡ ಗೌಡ್ರು

By

Published : Jun 9, 2020, 1:57 PM IST

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಇಂದು ರಾಜ್ಯಸಭೆಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪ್ರತಿ ಸೆಟ್ ನಾಮಪತ್ರಕ್ಕೂ ತಲಾ 10 ಶಾಸಕರಂತೆ 40 ಜನ ಪಕ್ಷದ ಶಾಸಕರು ಸೂಚಕರಾಗಿ ಸಹಿ ಮಾಡಿದ್ದಾರೆ. ನಿನ್ನೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ 4 ಸೆಟ್ ನಾಮಪತ್ರ ಸಲ್ಲಿಸಿದ್ದರು.

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಶಾಸಕರಾದ ಹೆಚ್ ‌ಡಿ ರೇವಣ್ಣ, ಹೆಚ್‌.ಕೆ ಕುಮಾರಸ್ವಾಮಿ, ಪರಿಷತ್‌ ಸದಸ್ಯ ಶರವಣ ಸೇರಿ ಹಲವರು ಸಾಥ್ ನೀಡಿದರು.

ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ದೇವೇಗೌಡರು ನಾಮಪತ್ರ ಸಲ್ಲಿಸಿದರು. ಎರಡು ವರ್ಷದ ಬಳಿಕ ಜೆಡಿಎಸ್‌ ವರಿಷ್ಠ ಹೆಚ್ ‌ಡಿ ದೇವೇಗೌಡ್ರು ಇಂದು ವಿಧಾನ ಸೌಧಕ್ಕೆ ಆಗಮಿಸಿದ್ದರು. 2018 ಮೇ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಅವಕಾಶ ಕೊಡದಿದ್ದಾಗ ಗವರ್ನರ್ ವಿರುದ್ಧ ಪ್ರತಿಭಟನೆಗೆ ಬಂದಿದ್ದ ದೇವೇಗೌಡರು ಆಗ ಒಮ್ಮೆ ವಿಧಾನಸೌಧಕ್ಕೆ ಭೇಟಿ ಕೊಟ್ಟಿದ್ದರು. ಅಂದು ಮಾಜಿ ಸಿಎಂ ಸಿದ್ದರಾಮಯ್ಯ, ದೇವೇಗೌಡರು ಸೇರಿದಂತೆ ರಾಜ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ಬಳಿಕ ಮೇ 23 ರಂದು ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂದು ಆಗಮಿಸಿದ್ದ ದೇವೇಗೌಡರು 2 ವರ್ಷ 17 ದಿನಗಳ ಬಳಿಕ ಇಂದು ವಿಧಾನಸೌಧಕ್ಕೆ ಆಗಮಿಸಿದ್ದರು.

ABOUT THE AUTHOR

...view details