ಕರ್ನಾಟಕ

karnataka

ETV Bharat / state

'ಬೊಂಬಾಯಿ ಮಿಠಾಯಿ ವಿಶ್ವನಾಥ್'​ ರಿಗೆ ವ್ಯಕ್ತಿಗತವಾಗಿ ಜರಿಯುವ ಹಕ್ಕಿದೆಯೇ: ಸಾರಾ ಮಹೇಶ್​ ಆಕ್ರೋಶ - bengaluru news

'ಬೊಂಬಾಯಿ ಮಿಠಾಯಿ 'ರುಚಿ ಸವಿದಿದ್ದು ಮಂತ್ರಿಯಾಗುವ ತಿರುಕನ ಕನಸನ್ನು ಹೆಚ್. ವಿಶ್ವನಾಥ್ ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಹೆಚ್. ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.

Sa Ra Mahesh
ಸಾರಾ ಮಹೇಶ್​ ಟ್ವೀಟ್​

By

Published : Jan 8, 2021, 12:27 PM IST

ಬೆಂಗಳೂರು:ಬೌದ್ಧಿಕ ದಿವಾಳಿತನಕ್ಕೆ ತುತ್ತಾದವರು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವ್ಯಕ್ತಿಗತ ಲೇವಡಿಗಿಳಿಯುತ್ತಾರೆ. ಅವರು ಎಂದೋ ಬಫೂನ್‌ ಆಗಿರುವುದನ್ನು ಮರೆತಿರುತ್ತಾರೆ. 'ಬೊಂಬಾಯಿ ಮಿಠಾಯಿ' ರುಚಿ ಸವಿದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಹೆಚ್. ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬೊಂಬಾಯಿ ಮಿಠಾಯಿ ವಿಶ್ವನಾಥ್' ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ? ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್​ಗಳು: ಹೆಚ್.ವಿಶ್ವನಾಥ್

ತಾನು ಘನವಾಗದೆ ಘನವೇನು ಬಂತು. ಹರುಕುಬಾಯಿ, ಕೊಳೆತ ಮೆದುಳು ಮಂತ್ರಿಗಿರಿಯ ಘನತೆಗೆ ಊಳಿಡುತಿದೆ. ಎಂದೋ ಭಿಕ್ಷುಕನಾಗಿರುವ ವಿಶ್ವನಾಥ್ ಎರಡು ಬಾರಿ ಮುಖ್ಯಮಂತ್ರಿಯಾದವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಚ್ಚರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details