ಕರ್ನಾಟಕ

karnataka

ETV Bharat / state

ಮಂತ್ರಿಮಂಡಲಕ್ಕೆ ಸೇರಿಸಿಕೊಂಡರೆ ಪಕ್ಷ, ರಾಜ್ಯಕ್ಕೆ ಪ್ರಾಮಾಣಿಕ ಕೆಲಸ ಮಾಡುವೆ: ನಿರಾಣಿ - ಮಾಜಿ ಸಚಿವ ಮುರುಗೇಶ್ ನಿರಾಣಿ

ಮಂತ್ರಿಮಂಡಲದಲ್ಲಿ ಅವಕಾಶ ನೀಡಿದರೆ ಖಂಡಿತವಾಗಿ ಪಕ್ಷ ಹಾಗೂ ರಾಜ್ಯಕ್ಕೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

Ex Minister Murgesh Nirani
Ex Minister Murgesh Nirani

By

Published : Jul 27, 2021, 10:30 PM IST

ಬೆಂಗಳೂರು:ನನ್ನನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಂಡರೆ ಪಕ್ಷಕ್ಕೆ ಮತ್ತೆ ರಾಜ್ಯಕ್ಕೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬೊಮ್ಮಾಯಿ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರಾಣಿ

ಶಾಸಕಾಂಗ ಸಭೆ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಿರಾಣಿ, ನಮ್ಮ ಸ್ನೇಹಿತರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದರೆ ಸಂತೋಷವೇ ಅಲ್ಲವೇ?. ಯಡಿಯೂರಪ್ಪನವರು ನಮ್ಮ ನಾಯಕರು.‌ ಅವರು ಎಲ್ಲರನ್ನೂ ಬೆಳೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ನಾಯಕರು ಅಣ್ಣ ತಮ್ಮಂದಿರಂತೆ. ಬಸವರಾಜ ಬೊಮ್ಮಾಯಿ ಅವರು ರಾಜ್ಯ ನಡೆಸಲು ಅರ್ಹ ವ್ಯಕ್ತಿ. ಅವರು ನನಗೆ ಸ್ನೇಹಿತ ಕೂಡ ಆಗಿದ್ದು, ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದ್ದೇವೆ ಎಂದರು.

ಇದನ್ನೂ ಓದಿ: ದೇವೇಗೌಡ-ಕುಮಾರಸ್ವಾಮಿ; ಎಸ್.ಆರ್‌ ಬೊಮ್ಮಾಯಿ- ಬಸವರಾಜ್ ಬೊಮ್ಮಾಯಿ- ಕರ್ನಾಟಕದಲ್ಲಿ ಮರುಕಳಿಸಿದ ಇತಿಹಾಸ

ಹೈಕಮಾಂಡ್​ ಬಗ್ಗೆ ವಿಶ್ವಾಸ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ನನಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದರೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವೆ. ಆ ಕೆಲಸವನ್ನೂ ನೀಡದಿದ್ದರೆ ನನ್ನ ಕೆಲಸ ಮಾಡುತ್ತೇನೆ ಎಂದರು.

ABOUT THE AUTHOR

...view details