ಬೆಂಗಳೂರು :ಉದಯನಿಧಿ ಅಂತವರು ನೂರು ತಲೆಮಾರಿನವರು ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದರೆ, ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸನಾತನ ಧರ್ಮಕ್ಕೆ ಇದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೂರ್ಯನಿಗೆ ನೂರು ಜನ ಸೇರಿ ಉಗಿದರೆ ಸೂರ್ಯನ ಪ್ರಖರತೆ ಕಡಿಮೆ ಆಗಲ್ಲ. ಸನಾತನ ಧರ್ಮ ನಿತ್ಯ ನೂತನ ಅಮರ. ಯಾರೋ ಮಾತಾಡ್ತಾರೆ ಅಂದರೆ ಅದರ ಪಾವಿತ್ರ್ಯತೆ ಕಡಿಮೆ ಆಗಲ್ಲ. ಆದರೆ, ಕಾಂಗ್ರೆಸ್ ಅವರ ಜೊತೆಗೆ ಮೈತ್ರಿಕೂಟ ಮಾಡಿಕೊಳ್ಳುತ್ತಾ? ಅವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಾ? ಎಂದು ಪ್ರಶ್ನಿಸಿದರು.
ಇಂಡಿಯಾ ಮೈತ್ರಿಕೂಟದ ದಿಕ್ಕು ಮತ್ತು ಆಲೋಚನೆ ಯಾವ ರೀತಿ ಇದೆ ಎಂದು ಮೊದಲ ಹೇಳಿಕೆಯಿಂದ ಇಂದು ಹೊರ ಬಿದ್ದಿದೆ. ಡಿಎಂಕೆಯಿಂದ ಆರಂಭವಾಗಿ ಎಲ್ಲಾ ಒಕ್ಕೂಟ ಕೂಡ ಹಿಂದೂ, ಸನಾತನ ಧರ್ಮ ಟೀಕೆ ಮಾಡುವುದೇ ಇದರ ಹಿಡನ್ ಅಜೆಂಡಾ ಎಂದು ಸ್ಪಷ್ಟವಾಗಿದೆ. ಈ ರೀತಿಯ ಹೇಳಿಕೆ ಮೊದಲನೇಲ್ಲ. ಸಿಎಂ ಸಿದ್ದರಾಮಯ್ಯ ಸಹ ಸಮಾಜವಾದದ ಭಾಷಣ ಮಾಡುತ್ತಾ, ಭಾಗ್ಯಲಕ್ಷ್ಮಿ ಬಾಂಡ್ ಚಾಲನೆ ನೀಡುವ ಮೂಲಕ ತಮ್ಮ ಮಗನಿಗೆ ಅಧಿಕಾರಕೊಡುವ ಕಾರಣಕ್ಕೆ ಮೈಸೂರಿನಲ್ಲಿ ಕಾರ್ಯಕ್ರಮ ಮಾಡಿದ್ದು ನೋಡಿದ್ದೇನೆ ಎಂದು ಕುಟುಕಿದರು.
ಸನಾತನ ಧರ್ಮದ ಬಗ್ಗೆ ಮಾತನಾಡುವವರು ಮನೆಯಲ್ಲಿ ಭಗವಂತನ ಆರಾಧನೆ ಮಾಡ್ತಾರೆ. ಮನೆಯಲ್ಲಿ ಪೂಜೆ, ಹೋಮ ಮಾಡಿಯೇ ಹೊರ ಬರ್ತಾರೆ. ಅವರಿಗೆ ಆತ್ಮ ರಕ್ಷಣೆ ಸಿಗಬೇಕು ಅಂದರೆ ಮನೆಯಲ್ಲಿ ಭಗವಂತನ ಆರಾಧನೆಯಲ್ಲಿ ಮಾಡುತ್ತಾರೆ. ಅಧಿಕಾರ ಬೇಕು ಅಂದಾಗ ಹೊರಬಂದು ಸನಾತನ ಧರ್ಮ ಹೀಯಾಳಿಸುತ್ತಾರೆ. ಭಾಗ್ಯಲಕ್ಷ್ಮೀ ಯೋಜನೆ ಮೊದಲ ಬಾಂಡ್ ಮೈಸೂರಿನ ಚಾಮುಂಡೇಶ್ವರಿ ನೀಡುವ ಮೂಲಕ ಅದರ ಅನುಗ್ರಹ ರಾಜ್ಯ ಸರ್ಕಾರ ಪಡೆದುಕೊಂಡಿದೆ ಎಂದು ಕಿಡಿಕಾರಿದರು.
ಇದನ್ನು ಯಾರು ಸಹಿಸಲ್ಲ, ಒಕ್ಕೂಟದ ಮಾಸಿಕ ಸ್ಥಿತಿ ಅಂತ ಗೊತ್ತಾಗುತ್ತದೆ. ಈ ರೀತಿಯ ಭೇಕಾಬಿಟ್ಟಿ ಹೇಳಿಕೆ ಕೊಡುವುದು ಸಮಾಜ ಮುಂದಿನ ದಿನ ಸಹಿಸಲ್ಲ. ಉದಯನಿಧಿ ಸ್ಟಾಲಿನ್ ಹೇಳಿಕೆ ಅವರ ಕಾಂಗ್ರೆಸ್ ಮೈತ್ರಿ ಕೂಟ ಒಪ್ಪಿಕೊಳ್ಳುತ್ತಾ?. ಎಲ್ಲವನ್ನೂ ಕಾಂಗ್ರೆಸ್ ಹೇಳಬೇಕು ಎಂದು ಸುನೀಲ್ ಕುಮಾರ್ ಸವಾಲು ಹಾಕಿದರು.