ಬೆಂಗಳೂರು: ಪ್ರಿಯಕರನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕಳೆದ 6 ವರ್ಷಗಳಿಂದ ಯುವತಿಯನ್ನು ಆರೋಪಿ ಬಬಿತ್ ಪ್ರೀತಿಸುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪವಾಗಿ ಲವ್ ಬ್ರೇಕ್ ಅಪ್ ಆಗಿತ್ತು. ಯುವತಿ ಬಬಿತ್ನ ಬಿಟ್ಟು ರಾಹುಲ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಹೀಗಾಗಿ ಕೋಪಗೊಂಡ ಬಬಿತ್ ಆಕೆಯನ್ನು ಕರೆದು ವಾರ್ನ್ ಮಾಡಿದ್ದ. ಮತ್ತೆ ಯುವತಿ ಮಾತು ಕೇಳದ ಕಾರಣ ಆಕೆಯ ತಲೆಗೆ ಹೆಲ್ಮೆಟ್ ನಿಂದ ಮನಬಂದಂತೆ ಹಲ್ಲೆ ಮಾಡಿದ್ದ.
ಘಟನೆ ಸಂಬಂಧಿಸಿದಂತೆ ಪೊಲೀಸರು ಬಬಿತ್ ಹಾಗೂ ರಾಹುಲ್ನನ್ನ ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಎನ್ ಶಶಿಕುಮಾರ್, ತಲೆಗೆ ಹೆಚ್ಚು ಪೆಟ್ಟು ಬಿದ್ದಿತ್ತು. ವೈದ್ಯರು ಸಹ ಯುವತಿಯನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಿದರೂ ಆದ್ರೆ ಯುವತಿ ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ.