ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡಿದ್ರು. ದೆಹಲಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. 60ರ ದಶಕದಲ್ಲಿ ನಮಗೆ ತಿನ್ನಲು ಅನ್ನವಿರಲಿಲ್ಲ. ಇಂದಿರಾ ಗಾಂಧಿ ಬಂದ ಮೇಲೆ 'ಹಸಿರು ಕ್ರಾಂತಿ' ತಂದರು. ಅನ್ನದಾತನ ಬೆಂಬಲಕ್ಕೆ ನಿಂತರು. 10-12 ವರ್ಷದಲ್ಲಿ ಆಹಾರ ಸ್ವಾವಲಂಬನೆಯಾಯ್ತು. ಪ್ರತಿಯೊಬ್ಬರಿಗೂ ಅನ್ನ ಸಿಗುವಂತಾಯ್ತು. ಮನಮೋಹನ್ ಸಿಂಗ್ ಆಹಾರ ಭದ್ರತೆ ತಂದರು ಎಂದರು.
ಎಪಿಎಂಸಿ ತೆಗೆದು ಕಾರ್ಪೋರೇಟ್ ಮಧ್ಯವರ್ತಿಗಳಿಗೆ ನೀಡಲು ಸರ್ಕಾರದ ಹುನ್ನಾರ: ಪರಮೇಶ್ವರ್ ವಾಗ್ದಾಳಿ - state congress protest against new agricultural laws
ಯುಪಿಎ ಸರ್ಕಾರ 25 ಪದಾರ್ಥಗಳಿಗೆ ಎಂಎಸ್ಪಿ ಕೊಟ್ಟಿತ್ತು. ಎನ್ಡಿಎ ಸರ್ಕಾರ ಕಡಿಮೆ ಮಾಡಿದೆ. ದೇವರಾಜು ಅರಸು ಉಳುವವನೇ ಭೂಮಿಯ ಒಡೆಯ ಎಂದರು. ಶ್ರೀಮಂತರ ಕೈಯಲ್ಲಿದ್ದ ಭೂಮಿ ರೈತರಿಗೆ ಕೊಡಿಸಿದರು. ಆದರೆ ನೀವು ಮತ್ತೆ ಕಿತ್ತುಕೊಳ್ಳಲು ಹೊರಟಿದ್ದೀರಾ. ಮತ್ತೆ ಭೂ ಮಾಲೀಕರ ಕಾನೂನು ತರುತ್ತಿದ್ದೀರಾ. ರೈತನನ್ನು ಜೀತಕ್ಕೆ ಒಳಪಡಿಸುತ್ತಿದ್ದೀರಾ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ತೀವ್ರ ವಾಗ್ದಾಳಿ
TAGGED:
ಕಾಂಗ್ರೆಸ್ನಿಂದ ರಾಜಭವನ ಚಲೋ