ಕರ್ನಾಟಕ

karnataka

ETV Bharat / state

ಸಿದ್ದರಾಮಯರನ್ನು ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಮಾಜಿ ಸಿಎಂ ಬಿಎಸ್​ವೈ ಗುಡುಗು

ನಾವು ನಮ್ಮ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ. ಸಿಎಂ ಆಗಿಯೇ ಕೆಲಸ ಮಾಡಬೇಕು ಅಂತ ಏನು ಇಲ್ಲ. ಒಬ್ಬ ಶಾಸಕನಾಗಿ ಕೆಲಸ ಮಾಡುವೆ‌. ಸರ್ಕಾರದ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತೇನೆ ಎಂದು ಬಿಎಸ್​ವೈ ಹೇಳಿದರು.

ex-cm-yediyurappa-statement-about-siddaramaiah
ಸಿದ್ದರಾಮಯರನ್ನು ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಮಾಜಿ ಸಿಎಂ ಬಿಎಸ್​ವೈ

By

Published : Sep 13, 2021, 12:42 PM IST

ಬೆಂಗಳೂರು:ಸಿದ್ದರಾಮಯ್ಯ ಆಕಸ್ಮಾತ್ ಆಗಿ ಗೆದ್ದರು. ಅವರನ್ನು ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡ್ತೇವೆ ಎ‌ಂದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಸಿಎಂ ಸ್ಥಾನದಿಂದ‌ ಕೆಳಗಡೆ ಇಳಿದ ಬಳಕ ಅಧಿವೇಶನಕ್ಕೆ ಬರ್ತಾ ಇದ್ದೇನೆ. ಬೊಮ್ಮಾಯಿ ಅವರು ಸಿಎಂ ಆಗಿ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ದನಿದ್ದೇನೆ. ಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತೇವೆ‌ ಎಂದು ಹೇಳಿದರು.

ನಾವು ನಮ್ಮ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ. ಸಿಎಂ ಆಗಿಯೇ ಕೆಲಸ ಮಾಡಬೇಕು ಅಂತ ಏನೂ ಇಲ್ಲ. ಒಬ್ಬ ಶಾಸಕನಾಗಿ ಕೆಲಸ ಮಾಡುವೆ‌. ಸರ್ಕಾರದ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತೇನೆ ಎಂದರು.

ಸದನದಲ್ಲಿ ವಿಪ್ ಪಕ್ಕ ಆಸನ ವ್ಯವಸ್ಥೆ ನೀಡುವಂತೆ ಕೇಳಿದ್ದೇನೆ. ವಿಪ್ ಪಕ್ಕ ಆಸನ ವ್ಯವಸ್ಥೆ ಮಾಡುವುದಕ್ಕೆ ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹಾಲಿ ಸಿಎಂ-ಮಾಜಿ ಸಿಎಂ ಭೇಟಿ

ಹಾಲಿ ಸಿಎಂ - ಮಾಜಿ ಸಿಎಂ ಭೇಟಿ:

ಇತ್ತ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ವಿಧಾನಸೌಧದ ಲಾಂಜ್‌ನಲ್ಲಿ ಭೇಟಿಯಾದರು. ಮಾಜಿ ಸಿಎಂ ಜೊತೆ ಸಿಎಂ ಸ್ವಲ್ಪ ಹೊತ್ತು ಸೌಹಾರ್ದಯುತವಾಗಿ ಮಾತನಾಡಿದರು. ಇದೇ ವೇಳೆ, ಸಚಿವರು ಮಾಜಿ ಸಿಎಂ ಯಡಿಯೂರಪ್ಪರ ಕಾಲಿಗೆ ನಮಸ್ಕರಿಸಿದರು.

ಇದನ್ನೂ ಓದಿ:ಸದನದ ಕೊನೆಯ ಸಾಲಿನಲ್ಲಿ ಕುಳಿತು ಚರ್ಚೆ ಆಲಿಸುತ್ತಿರುವ ಮಾಜಿ ಸಿಎಂ BSY

ABOUT THE AUTHOR

...view details