ಬೆಂಗಳೂರು:ಬಿಜೆಪಿಯು ಇಡೀ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ಅವರು, ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮುಗ್ದ ರೈತರ ಮೇಲೆ ಕೇಂದ್ರ ಸಚಿವರ ಕಾರನ್ನು ಹತ್ತಿಸಿರುವುದು ದುರದೃಷ್ಟಕರ ವಿಚಾರ. ಈ ದಾಳಿಯನ್ನು ನಾನು ಖಂಡಿಸುತ್ತೇನೆ. ಬಿಜೆಪಿ ಮತ್ತು ಅದರ ರಾಜ್ಯ ಘಟಕ ಇಡೀ ದೇಶವನ್ನು ಗೂಂಡಾ ರಾಜ್ ಆಗಿ ಮಾಡಿದೆ. ಅವರ ತಪ್ಪುಗಳನ್ನು ಪ್ರಶ್ನಿಸುವ ಅವಕಾಶ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ ಹಿಂಸಾಚಾರ: ಗಲಭೆಯಲ್ಲಿ 8 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ