ಕರ್ನಾಟಕ

karnataka

ETV Bharat / state

ಹೋಟೆಲ್​​ನಲ್ಲಿ ಗರಿಗರಿ ಮಸಾಲೆ  ದೋಸೆ ಸವಿದು ಸಿದ್ದು&ಟೀಂ ರಿಲ್ಯಾಕ್ಸ್​

ಮಾಜಿ ಸಿಎಂ ಸಿದ್ದರಾಮಯ್ಯ ಮಲ್ಲೇಶ್ವರದ ಸಿಟಿಆರ್ ಹೋಟೆಲ್​ಗೆ ತಮ್ಮ ಆಪ್ತರಾದ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ, ಪ್ರಕಾಶ್ ರಾಥೋಡ್ ಮತ್ತಿತರ ಜತೆ ದೋಸೆ ಸವಿದರು. ಇಂದು ಬೆಳಗ್ಗೆಯಿಂದಲೂ ತೀವ್ರ ಒತ್ತಡದಿಂದ ಬಳಲಿದ್ದ ಅವರು, ಸಂಜೆ ಆರಾಮಾಗಿ ದೋಸೆ ಸವಿದು ರೆಸ್ಟ್​ ಮಾಡಿದ್ರು.

ಮಾಜಿ ಸಿಎಂ ಸಿದ್ದರಾಮಯ್ಯ

By

Published : Jul 30, 2019, 11:12 PM IST

Updated : Jul 30, 2019, 11:17 PM IST

ಬೆಂಗಳೂರು:ಸಮ್ಮಿಶ್ರ ಸರ್ಕಾರದ ಪತನ, ಆನಂತರ ನಡೆದ ವಿದ್ಯಮಾನಗಳ ತೀವ್ರ ಒತ್ತಡದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಂಗಡಿಗರ ಜತೆ ಇಂದು ಹೋಟೆಲ್​​ನಲ್ಲಿ ಗರಿಗರಿ ಮಸಾಲೆ ದೋಸೆ ಸವಿದರು.

ಮಲ್ಲೇಶ್ವರದ ಸಿಟಿಆರ್ ಹೋಟೆಲ್​ಗೆ ತಮ್ಮ ಆಪ್ತರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ, ಪ್ರಕಾಶ್ ರಾಥೋಡ್ ಮತ್ತಿತರರ ಜತೆ ಸಿದ್ದರಾಮಯ್ಯ ದೋಸೆ ಸವಿದರು. ಇಂದು ಬೆಳಗ್ಗೆಯಿಂದಲೂ ತೀವ್ರ ಒತ್ತಡದಿಂದ ಬಳಲಿದ್ದ ಅವರು, ಸಂಜೆ ಆರಾಮಾಗಿ ದೋಸೆ ಸವಿದು, ವಿಶ್ರಾಂತಿ​ ಮಾಡಿದ್ರು.

ದೋಸೆ ಸವಿದ ಸಿದ್ದರಾಮಯ್ಯ

ಮಧ್ಯಾಹ್ನ ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನಕ್ಕೆ ತೆರಳಿದ್ದ ಸಿದ್ದರಾಮಯ್ಯ ಅಲ್ಲೇ ಕೆಲಕಾಲ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಆ ಬಳಿಕ ಸದಾಶಿವನಗರದ ಎಸ್.ಎಂ. ಕೃಷ್ಣ ನಿವಾಸಕ್ಕೆ ತೆರಳಿ ಸಿದ್ದಾರ್ಥ್‌ ಕಣ್ಮರೆ ಹಿನ್ನೆಲೆಯಲ್ಲಿ ಸಮಾಧಾನ ಹೇಳಿದ್ರು. ಸಂಜೆ ತಮ್ಮ ನಿವಾಸ ಕಾವೇರಿಗೆ ವಾಪಸಾಗುವ ಮೊದಲು ಮಲ್ಲೇಶ್ವರಂನ ಹೋಟೆಲ್​ಗೆ ತೆರಳಿದರು.

ಸಾಮಾನ್ಯವಾಗಿ ಶಿವಾನಂದ ಸರ್ಕಲ್ ಸಮೀಪದ ಜನಾರ್ಧನ್ ಹೋಟೆಲ್ ಅವರ ನೆಚ್ಚಿನ ತಾಣಗಳಲ್ಲಿ ಒಂದು. ಅಂತೆಯೇ ಸಿಟಿಆರ್ ಹೋಟೆಲ್​ಗೂ ಸಹ ಸಿದ್ದರಾಮಯ್ಯ ಆಗಾಗ ಭೇಟಿ ನೀಡುತ್ತಿರುತ್ತಾರೆ.

Last Updated : Jul 30, 2019, 11:17 PM IST

ABOUT THE AUTHOR

...view details