ಕರ್ನಾಟಕ

karnataka

ETV Bharat / state

ಅತೃಪ್ತರಿಗೆ ಇಲ್ಲಿ ಉಳಿಯೋಕೆ ಮುಳ್ಳು ಚುಚ್ಚಿಕೊಂಡಿತ್ತಾ: ಸಿದ್ದರಾಮಯ್ಯ ವ್ಯಂಗ್ಯ - vote of confidence

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಗೆ ನೋವಾಗಿದ್ದರೆ ಇಲ್ಲಿಯೇ ಇರಬಹುದಿತ್ತಲ್ಲಾ? ಇಲ್ಲೇನು‌ ಮುಳ್ಳು ಚುಚ್ಚಿಕೊಂಡಿತ್ತಾ ಎಂದು ವ್ಯಂಗ್ಯವಾಡಿದರು.

ಅತೃಪ್ತ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಿಎಂ

By

Published : Jul 22, 2019, 4:11 PM IST

Updated : Jul 22, 2019, 7:27 PM IST

ಬೆಂಗಳೂರು:ಸದನದಲ್ಲಿ ಇಂದು ವಿಶ್ವಾಸಮತ ಯಾಚನೆ ಮಾಡುವ ತೀರ್ಮಾನ ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಶ್ವಾಸಮತ ಯಾಚನೆ ಮಾಡ್ತೀವಿ ಎಂದು ಸದನದಲ್ಲಿ ಹೇಳಿದ್ದೇವೆ. ಅದರಂತೆ ಇಂದು ಸ್ಪೀಕರ್ ತೀರ್ಮಾನಿಸುತ್ತಾರೆ. ಕಾಂಗ್ರೆಸ್​ನಿಂದ ಈಗಾಗಲೇ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಲಾಗಿದೆ. ನಾಳೆ ವಿಚಾರಣೆಗೆ ಬರಲಿದೆ ಎಂದರು. ಇದನ್ನೂ ಓದಿ: ಚರ್ಚೆಗೆ ಮತ್ತೆರಡು ದಿನ ಕಾಲಾವಕಾಶ ಕೊಡಿ: ಸ್ಪೀಕರ್ ಬಳಿ ಮನವಿ ಮಾಡಿಕೊಂಡ್ರಾ ಸಿಎಂ?

ಅತೃಪ್ತರು ಬೆಂಗಳೂರಿಗೆ ಬರಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅತೃಪ್ತ ಶಾಸಕರು ಬಂದರೆ ನಮ್ಮ ಪರವಾಗಿಯೇ ಇರುತ್ತಾರೆ. ಅತೃಪ್ತರು ಹೇಳಿದಂತೆ ಮುಂಬೈ ರೆಸಾರ್ಟ್​ನಲ್ಲಿ ಅವರು ಖುಷಿಯಾಗಿಲ್ಲ. ಇದ್ದರೆ ಇಲ್ಲೇ ಇರಬಹುದಿತಲ್ಲ. ಇಲ್ಲೇನು‌ ಮುಳ್ಳು ಚುಚ್ಚಿಕೊಂಡಿತ್ತಾ ಎಂದು ವ್ಯಂಗ್ಯವಾಡಿದರು.

Last Updated : Jul 22, 2019, 7:27 PM IST

ABOUT THE AUTHOR

...view details