ಬೆಂಗಳೂರು:ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ಇಂದು ಶಾಸಕ ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನೀಡಿದ ಬಳಿಕ ಉಸ್ತುವಾರಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಅವರು, ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.
ಬೆಳಗ್ಗೆ ಯಿಂದಲೂ ಫುಲ್ ಆ್ಯಕ್ಟೀವ್... ದೊಡ್ಡ ಗೌಡರು, ರೆಡ್ಡಿ ಭೇಟಿಯಾದ ಹೆಚ್ಡಿಕೆ - Kannada news
ಮೈತ್ರಿ ಸರ್ಕಾರದ ಪತನದ ನಂತರ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿದೇದರಿದ್ದು ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕ ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನೀಡಿದ್ದು ಕುತೂಹೂಲ ಮೂಡಿಸಿದೆ.
ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನಂತರ ಗೌಡರ ಜೊತೆ ಚರ್ಚೆ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇಂದು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸ್ಪೀಕರ್ ನಿರ್ಧಾರ ಪ್ರಕಟ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ತಂತ್ರಗಾರಿಕೆ ಕುರಿತು ದೇವೇಗೌಡರ ಜೊತೆ ಹೆಚ್.ಡಿಕೆ ಚರ್ಚೆ ನಡೆಸಿದ್ದಾರೆ.
ದೇವೇಗೌಡರು ಹಲವು ಸಲಹೆಗಳನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಯಿಂದಲೂ ಫುಲ್ ಆ್ಯಕ್ಟೀವ್ ಆಗಿರುವ ಕುಮಾರಸ್ವಾಮಿ ಅವರು, ದೇವೇಗೌಡರ ಭೇಟಿ ನಂತರ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವರೇ ಅಥವಾ ಸ್ಪೀಕರ್ ಅವರನ್ನು ಭೇಟಿ ಮಾಡುವರೇ? ಎಂಬ ಕುತೂಹಲ ಮೂಡಿಸಿದೆ.