ಕರ್ನಾಟಕ

karnataka

ETV Bharat / state

'ಗ್ರಾಮ ಸ್ವರಾಜ್ಯ' ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾಗದಿರಲಿ; ಹೆಚ್​ಡಿಕೆ ಸಲಹೆ - Gram Panchayat elections

ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿ, ಹಳ್ಳಿ ಜನರ ಸಮಸ್ಯೆಗಳು ಶಾಶ್ವತವಾಗಿ ನೀಗಲಿ ಎಂದಿದ್ದಾರೆ.

Ex CM Kumaraswamy Tweet About BJP Grama Swarajya Convention
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

By

Published : Dec 3, 2020, 5:09 PM IST

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಬಿಜೆಪಿ 'ಗ್ರಾಮ ಸ್ವರಾಜ್ಯ' ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ. ಸಂಘಟನೆ ಉದ್ದೇಶದ ಈ ಸಮಾವೇಶಗಳು ಗ್ರಾಮಗಳನ್ನು ವಿಶ್ವಾಸಕ್ಕೆ ಪಡೆಯುಲು, ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಲಿ. ಈ ಮೂಲಕ ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ : ಹಳ್ಳಿಯಿಂದ ದಿಲ್ಲಿಯವರೆಗೂ ಬಿಜೆಪಿ.. ನಳಿನ್ ಕುಮಾರ್ ಕಟೀಲ್

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಗ್ರಾಮ ಸ್ವರಾಜ್ಯ ಎಂಬುದು ಸಂಘಟನೆ ಉದ್ದೇಶದ ಸಮಾವೇಶವಾದರೂ, ಅವುಗಳನ್ನು ಹಳ್ಳಿಗಳ ಹಂತಕ್ಕೆ ಕೊಂಡೊಯ್ಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆ ಮೂಲಕವಾದರೂ ನಮ್ಮ ಹಳ್ಳಿಗಳ ಜ್ವಲಂತ ಸಮಸ್ಯೆಗಳು ಬಿಜೆಪಿ ಸಚಿವರು, ಶಾಸಕರು ಮತ್ತು ಸರ್ಕಾರದ ಅರಿವಿಗೆ ಬರಲಿ. ಹಾಗಾದರೂ ಹಳ್ಳಿ ಜನರ ಸಮಸ್ಯೆಗಳು ಶಾಶ್ವತವಾಗಿ ನೀಗಲಿ ಎಂದು ಆಶಿಸುತ್ತೇನೆ ಎಂದು ಕುಟುಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್​

'ಗ್ರಾಮ ಸ್ವರಾಜ್ಯ' ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾದರೆ ಅದು ಸ್ವಾರ್ಥವಾಗುತ್ತದೆ. ಗ್ರಾಮಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದ್ದೇ ಆದರೆ, ಗ್ರಾಮ ಸ್ವರಾಜ್ಯದ ಹೆಸರಿಗೆ ಅರ್ಥ ಸಿಗುತ್ತದೆ. ಹಳ್ಳಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ ಎಂದು ಸಲಹೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್​

ಇದನ್ನೂ ಓದಿ : ಗ್ರಾಮ ಪಂಚಾಯತ್‌ಗಳಿಗೆ ವರ್ಷಕ್ಕೆ 1.5 ಕೋಟಿ ರೂ. ನೇರ ಅನುದಾನ : ಅಶ್ವತ್ಥ್ ನಾರಾಯಣ

ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ. ಬಿಜೆಪಿ ನಾಯಕರು ಆ ಗ್ರಾಮಗಳಿಗೆ ಭೇಟಿ ನೀಡಲಿ. ಅಲ್ಲಿನ ಸಮಸ್ಯೆಗಳು, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರ ಪರದಾಟ, ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವರಿಗೆ ಪರಿಹಾರ ಒದಗಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details