ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಕಡೆಗಣಿಸಿ ಪಿಎಂ ಕಾರ್ಯಕ್ರಮ: ಕಾಂಗ್ರೆಸ್ ಲೇವಡಿ - national youth day

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಕಡೆಗೆಣನೆ, ಕಾಲೆಳದ ಕಾಂಗ್ರೆಸ್​ ಪಕ್ಷ - ಬಿಜೆಪಿ ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ ಎಂದು ಟೀಕೆ- ಸ್ಯಾಂಟ್ರೋ ರವಿಯನ್ನು ರಾಜ್ಯ ಬಿಜೆಪಿ ಸರ್ಕಾರ "ಚೀಫ್ ಬ್ರೋಕರ್" ಆಗಿ ನೇಮಿಸಿಕೊಂಡಿದೆ

ex-cm-ignores-pms-program-congress-mocked
ಮಾಜಿ ಸಿಎಂ ಕಡೆಗಣಿಸಿ ಪಿಎಂ ಕಾರ್ಯಕ್ರಮ: ಕಾಂಗ್ರೆಸ್ ಲೇವಡಿ

By

Published : Jan 12, 2023, 10:49 PM IST

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಡೆಗಣನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
ಟ್ವೀಟ್ ಮಾಡಿ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್, ಸ್ವಂತ ಕ್ಷೇತ್ರದಲ್ಲೇ ಶಾಸಕ ಜಗದೀಶ್ ಶೆಟ್ಟರ್ ಕಡೆಗಣಿಸಿದ ಬಿಜೆಪಿ. ಇದು ಬಿಜೆಪಿ vs ಬಿಜೆಪಿ ಎಂದು ಕಿಚಾಯಿಸಿದ ರಾಜ್ಯ ಕಾಂಗ್ರೆಸ್, ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಹಾಗೂ ನಾಯಕರ ನಡುವೆಯೇ ಅಸಮಾಧಾನ ಹೆಚ್ಚಾಗಿದೆ ಎಂಬ ಆರೋಪ ಮಾಡಿದೆ.

ಪ್ರಧಾನಿ ಕಾರ್ಯಕ್ರಮಕ್ಕೆ ಟೀಕೆ:ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಟೀಕಿಸಿರುವ ಕಾಂಗ್ರೆಸ್, ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ. ಯುವಜನರ ಉದ್ಯೋಗ ಮಾರಾಟ, ಶಿಷ್ಯವೇತನ ನೀಡದೇ ಯುವಜನರ ಶಿಕ್ಷಣಕ್ಕೆ ದ್ರೋಹ, ಕೆಪಿಎಸ್​ಸಿ ಕೆಇಎ ಹಾಗೂ ಕೆಎಸ್​ಪಿ ಅಭ್ಯರ್ಥಿಗಳಿಗೆ ವಂಚನೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ ಎಂದಿದೆ.

ಯುವಕರಿಗೆ ಪಕೋಡಾ ಮಾರುವ ಸಲಹೆ ನೀಡಿದ ನರೇಂದ್ರ ಮೋದಿ ಅವರೇ, ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸ್​​ಗಳ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ? ಎಂದು ಮೋದಿ ಮೌನ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದೆ.

ಮಹದಾಯಿ ಯೋಜನೆ ವಿರೋಧಿಸಿ, ಡಿಪಿಆರ್ ಒಪ್ಪಿಗೆಯನ್ನು ರದ್ದುಪಡಿಸುವಂತೆ ಗೋವಾ ಸಚಿವರ ನಿಯೋಗ ಮಾಡಿದ ಮನವಿಗೆ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ. "ಸಕಾರಾತ್ಮಕ" ಅಂದರೆ ಏನು ಬಸವರಾಜ್ ಬೊಮ್ಮಾಯಿ ಅವರೇ? ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ? ಗೋವಾದ ಬಿಜೆಪಿ ಸರ್ಕಾರದ ವಿರೋಧಕ್ಕೆ ನರೇಂದ್ರ ಮೋದಿ ನಿಲುವು ಏನು? ಮೌನವೇಕೆ? ನರೇಂದ್ರ ಮೋದಿ ಅವರೇ, ಸ್ಯಾಂಟ್ರೋ ರವಿಯನ್ನು ರಾಜ್ಯ ಬಿಜೆಪಿ ಸರ್ಕಾರ "ಚೀಫ್ ಬ್ರೋಕರ್" ಆಗಿ ನೇಮಿಸಿಕೊಂಡಿದೆ.

ಎಲ್ಲಾ ವರ್ಗಾವಣೆಗಳಿಗೆ ಆತನೇ ಚೀಫ್ ಬ್ರೋಕರ್. ನಿಮ್ಮದೇ ಪಕ್ಷದ ಕಾರ್ಯಕರ್ತನ "ಸ್ಯಾಂಟ್ರೋ ಸಾಧನೆ" ಬಗ್ಗೆ, ನಿಮ್ಮ ಸರ್ಕಾರದ ಸಹಬಾಗಿತ್ವದ ಬಗ್ಗೆ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮಾಹಿತಿ ಪಡೆದು ಮಾತಾಡುವಿರಾ? ಎಂದು ಪ್ರಶ್ನೆ ಮಾಡಿದೆ.

ವಿಧಾನ ಸೌಧ ಈಗ ವ್ಯಾಪಾರ ಸೌಧ: ವಿಧಾನಸೌಧದಲ್ಲಿ ₹10 ಲಕ್ಷ ಹಣದೊಂದಿಗೆ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದರು. ವಿಧಾನ ಸೌಧ ಈಗ ವ್ಯಾಪಾರ ಸೌಧವಾಗಿದೆ, ಸರ್ಕಾರಿ ಹುದ್ದೆಗಳನ್ನು ರೇಟ್ ಕಾರ್ಡ್‌ನೊಂದಿಗೆ ಮಾರಾಟಕ್ಕಿಡಲಾಗಿದೆ, ಮೋದಿ ಅವರೇ, ಯುವಜನರ ನಿರುದ್ಯೋಗ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದು ಪದವಾದರೂ ಮಾತಾಡುವಿರಾ? ಪ್ರಧಾನಿ ಅವರೇ, ಧಾರವಾಡದಲ್ಲಿರುವ ಕೈಮಗ್ಗ ಧ್ವಜ ತಯಾರಕರ ಬದುಕಿಗೆ ಮಾರಕವಾಗುವಂತೆ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿದ್ದೀರಿ,

ಪರಂಪರಾಗತವಾಗಿ ಧ್ವಜ ತಯಾರಿಸುತ್ತಿದ್ದವರ ಬದುಕಿನ ಸಂಕಷ್ಟಗಳನ್ನು ಆಲಿಸುವಿರಾ? ಅವರ ಬಗ್ಗೆ ಮಾತಾಡದೆ ಮೌನವಹಿಸಿರುವುದೇಕೆ?. 40% ಸರ್ಕಾರದ ಕಮಿಷನ್ ಕಿರುಕುಳಕ್ಕೆ ಸಂತೋಷ್ ಪಾಟೀಲ್ ಬರೆದ ಪತ್ರಕ್ಕೆ ತಮ್ಮ ಸ್ಪಂದನೆ ಶೂನ್ಯ. ತಾವು ಭ್ರಷ್ಟಾಚಾರಕ್ಕೆ ಮೌನದ ಮೂಲಕ ಬೆಂಬಲಿಸಿದ ಕಾರಣ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಬಲಿಯಾದ ಗುತ್ತಿಗೆದಾರರಾದ, ಸಂತೋಷ್, ಪ್ರಸಾದ್ ಕುಟುಂಬಗಳಿಗೆ ಸಾಂತ್ವನ ಹೇಳುವಿರಾ? ಎಂದು ಕೇಳಿದೆ.

ಇದನ್ನೂ ಓದಿ:ಪ್ರಧಾನಿ ರೋಡ್​ ಶೋ ವೇಳೆ ಭದ್ರತಾ ಲೋಪ: ಮೋದಿಗೆ ಹಾರ ಹಾಕಲು ಬಂದ ಬಾಲಕ! ವಿಡಿಯೋ..

ABOUT THE AUTHOR

...view details