ಬೆಂಗಳೂರು:ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ. ಅದಕ್ಕೆ ಕಾಲ ಕೂಡಿ ಬರಬೇಕು. ಅಲ್ಲಿಯವರೆಗೆ ತಿರುಕನ ಕನಸು ಕಾಣಬಾರದರು ಎಂದಿದ್ದಾರೆ.
ದೇವನಹಳ್ಳಿ ತಾಲೂಕು ಕಚೇರಿ ಬಳಿ ಮಕ್ಕಳ ತಜ್ಞರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನನಗೆ ಅರ್ಥವಾಗದಿರುವ ಪ್ರಶ್ನೆಯೆಂದರೆ
ಬಿಜೆಪಿ ಉಸ್ತುವಾರಿ ಬಂದು ಹೋದಾಗ ಸುದ್ದಿಯಾಗುತ್ತದೆ. ಕಾಂಗ್ರೆಸ್ ಉಸ್ತುವಾರಿ ಬಂದು ಹೋಗುವುದು ಸುದ್ದಿಯಾಗುವುದೇ ಇಲ್ಲ ಎಂದರು.
ಕೋವಿಡ್ ಕಾರಣದಿಂದ ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಬಹಳ ದಿನದ ಮೇಲೆ ಬರುತ್ತಿದ್ದಾರೆ. ಈ ಬಾರಿ ಬರುತ್ತಿರುವುದು ಸರ್ಕಾರದ ಮತ್ತು ಪಕ್ಷದ ಇಮೇಜ್ನ್ನು ಹೆಚ್ಚಿಸಲು. ಸಭೆಗೆ ಸಚಿವರನ್ನು ಕರೆದು ಸರ್ಕಾರದ ಇಮೇಜ್ ಹೆಚ್ಚಿಸಲು ಚರ್ಚಿಸಲಾಗುತ್ತದೆ. ಮಾಧ್ಯಮದಲ್ಲಿ ಬರುತ್ತಿರುವ ಯಡಿಯೂರಪ್ಪ ಬದಲಾವಣೆ ವಿಷ್ಯ ಶುದ್ಧ ಸುಳ್ಳು. ಬಿಎಸ್ವೈ ಬದಲಾವಣೆ ಮಾಡುವ ಪ್ರಸ್ತಾಪ ಶಾಸಕರ ಮತ್ತು ಕೇಂದ್ರ ನಾಯಕರ ಮುಂದೆಯೂ ಇಲ್ಲ. ಇದು ಹಾಗೆಯೇ ಸೃಷ್ಟಿಯಾಗಿದೆ ಹಾಗೆಯೇ ತೆರೆಮರೆಗೆ ಸರಿಯುತ್ತದೆ ಎಂದರು.
ಯಡಿಯೂರಪ್ಪ ಸೂಚನೆ ವಿಚಾರ: ಕೇಂದ್ರ ವರಿಷ್ಠರ ಮಾತಿಗೆ ಬೆಲೆಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. 10 ಜನ ಶಾಸಕರು ಅರುಣ್ ಸಿಂಗ್ ಜೊತೆ ಚರ್ಚಿಸಲಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಸಚಿವ ಸ್ಥಾನದ ಬಗ್ಗೆ ಚರ್ಚಿಸಲಿದ್ದಾರೆ. ಯಡಿಯೂರಪ್ಪ ಅವರನ್ನು ಉಳಿಸಲು ಅಥವಾ ತೆಗೆಯಲು ಶಾಸಕರು ಸಹಿ ಸಂಗ್ರಹ ಮಾಡುವಂತಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಒಂದು ವೇಳೆ ಸಹಿ ಸಂಗ್ರಹ ಮಾಡಿದರೆ ಪಕ್ಷ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.