ಬೆಂಗಳೂರು:ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಬಿಬಿಎಂಪಿಯಿಂದ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದ ಕಸವನ್ನು ಡಂಪಿಂಗ್ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಸಂಪೂರ್ಣ ಕಸ ಹಾಕುವುದನ್ನು ನಿಲ್ಲಿಸಲಾಗಿದ್ರೂ ಮಾವಳ್ಳಿಪುರದ ಸಮಸ್ಯೆ ತಪ್ಪಿರಲಿಲ್ಲ.
ಡಂಪಿಂಗ್ ಮಾಡಿದ್ದ ಕಸದಿಂದ ವಿಷಪೂರಿತ ನೀರು ಹರಿದು ಮಾವಳ್ಳಿಪುರದ ಕೆರೆ ಹಾಗೂ ನೀರಿನ ಮೂಲಗಳನ್ನು ಸೇರುತ್ತಿತ್ತು. ಇದರಿಂದ ಡೆಂಘಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆ ಗ್ರಾಮದ ಜನರು ತುತ್ತಾಗಿದ್ದರು. ಇದರ ಕಡೆ ಅಧಿಕಾರಿಗಳು ಗಮನ ಹರಿಸದೇ ಕಣ್ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಇದರ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಮಾಡಿತ್ತು.