ಕರ್ನಾಟಕ

karnataka

ETV Bharat / state

ರಾಷ್ಟ್ರಪಿತನ 150ನೇ ಜನ್ಮ ಸ್ಮರಣೆ; ಬಾಪುವಿಗೆ ಈಟಿವಿ ಭಾರತ ವಿಶೇಷ ನಮನ - Gandhi Jayanthi

ದೇಶದ ವಿವಿಧ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಡಿಜಿಟಲ್ ಮಾಧ್ಯಮ ಈಟಿವಿ ಭಾರತ ಖ್ಯಾತ ಕವಿ ನರಸಿನ್ಹ ಮೆಹ್ತಾ ಅವರ ಸುಂದರ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ನಾಳಿನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುತ್ತಿದೆ.

ಗಾಂಧಿ ವಿಶೇಷ ಹಾಡು ರಿಲೀಸ್​​

By

Published : Oct 1, 2019, 9:06 PM IST

Updated : Oct 2, 2019, 10:54 AM IST

ಅಕ್ಟೋಬರ್​ 2, ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನ. ಇಡೀ ರಾಷ್ಟ್ರವೇ ಬಾಪೂಜಿಯ 150 ನೇ ಜನ್ಮದಿನವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ನಾಳೆಗಾಗಿ ಎದುರು ನೋಡುತ್ತಿದೆ. ಇದೇ ವೇಳೆ ಈ ಟಿವಿ ಭಾರತ್ ಮಹಾತ್ಮನ ಜನ್ಮದಿನವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುತ್ತಿದೆ. ಗಾಂಧೀಜಿ ಅತ್ಯಂತ ಹೆಚ್ಚು ಇಷ್ಟಪಡುತ್ತಿದ್ದ ವೈಷ್ಣವ್ ಜನತೋ ತೇನೆ ರೆ ಕಹಿಯೇ ಹಾಡನ್ನು ಈಟಿವಿ ಭಾರತ ನೇತೃತ್ವದಲ್ಲಿ ದೇಶದ ಮಹಾನ್ ಗಾಯಕರು ಹಾಡಿದ್ದಾರೆ. ಅವರ ಸಿರಿಕಂಠದಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡನ್ನು ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ಲೋಕಾರ್ಪಣೆಗೊಳಿಸಿದ್ರು.

ಗಾಂಧಿ ವಿಶೇಷ ಹಾಡು ರಿಲೀಸ್​​

ಗಾಂಧೀಜಿ 150ನೇ ಜನ್ಮ ಜಯಂತಿ ಪ್ರಯುಕ್ತ ಕಳೆದ 40 ದಿನಗಳಿಂದ ಈಟಿವಿ ಭಾರತ ವಿಶೇಷ ಮಹತ್ವಪೂರ್ಣ ಲೇಖನ ಸರಣಿಗಳನ್ನು ಪ್ರಕಟಿಸುತ್ತಾ ಬಂದಿದೆ.

ಆರ್​. ವಿಜಯ್ ಪ್ರಕಾಶ್

ವೈಷ್ಣವ್ ಜನತೋ ತೇನೆ ರೆ ಕಹಿಯೇ, ಗಾಂಧೀಜಿ ಬಹಳವಾಗಿ ಇಷ್ಟಪಡುತ್ತಿದ್ದ ಭಜನೆ. 15ನೇ ಶತಮಾನದ ಗುಜರಾತಿನ ಕವಿ ನರಸಿನ್ಹ ಮೆಹ್ತಾ ರಚಿಸಿದ ಈ ಗೀತೆಯಲ್ಲಿ ವೈಷ್ಣವ ಜೀವನ ಮತ್ತು ಆದರ್ಶಗಳನ್ನು ಬಹಳ ಅರ್ಥಪೂರ್ಣವಾಗಿ ಹೇಳಲಾಗಿದೆ. ಈ ಗೀತೆಯಿಂದ ಪ್ರಭಾವಿತರಾದ ಮಹಾತ್ಮ ಗಾಂಧೀಜಿ ಕೂಡಾ ತಮ್ಮ ಜೀವನದಲ್ಲಿ ಸರಳತೆ, ಭಕ್ತಿ, ನಿರ್ಭೀತತೆ ಹಾಗೂ ಇನ್ನಿತರ ಅಂಶಗಳನ್ನು ಅಳವಡಿಸಿಕೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಈ ಹಾಡನ್ನು ದೇಶಭಕ್ತಿಯ ಸಂಕೇತವಾಗಿ ಪ್ರತಿದಿನ ಹಾಡಲಾಗುತ್ತಿತ್ತು. ಇದು ವಿಭಿನ್ನ ಜಾತಿ, ವರ್ಗಗಳ ಜನರು ಒಟ್ಟಿಗೆ ಸೇರಿಸಲು ಕೂಡಾ ಸಹಾಯಕವಾಗಿತ್ತು. ದೇಶದ ವಿವಿಧ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಡಿಜಿಟಲ್ ಮಾಧ್ಯಮವಾದ ಈಟಿವಿ ಭಾರತ ನರಸಿನ್ಹ ಮೆಹ್ತಾ ಅವರ ಈ ಸುಂದರ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ನಾಳಿನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುತ್ತಿದೆ. ಈ ಹಾಡಿನ ಮೂಲಕ ದೇಶದ ಅತ್ಯುತ್ತಮ ಗಾಯಕರನ್ನು ಈ ಒಂದು ವಿಶೇಷ ಗೀತೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಗೀತೆಯನ್ನು ಒಮ್ಮೆ ಕೇಳಿದರೆ ನಿಜವಾಗಿಯೂ ಎಂತವರಲ್ಲೂ ದೇಶಭಕ್ತಿ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.

ಎಸ್.ಪಿ. ಬಾಲಸುಬ್ರಹ್ಮಣ್ಯಂ

ತಮಿಳು ಭಾಷೆಯಲ್ಲಿ ಪಿ. ಉನ್ನಿಕೃಷ್ಣನ್, ತೆಲುಗು-ಎಸ್​​.ಪಿ.ಬಾಲಸುಬ್ರಹ್ಮಣ್ಯಂ, ಕನ್ನಡ-ಆರ್​. ವಿಜಯ್ ಪ್ರಕಾಶ್​​​, ಗುಜರಾತಿ-ಯೋಗೇಶ್ ಗಾದವಿ, ಅಸ್ಸಾಮಿ-ಪುಲಕ್ ಬ್ಯಾನರ್ಜಿ, ಮರಾಠಿ-ವೈಶಾಲಿ ಮದೆ, ಮಲಯಾಳಂ-ಕೆ.ಎಸ್​​ ಚಿತ್ರ, ಪಂಜಾಬಿ-ಶಂಕರ್ ಸಹ್ನೈ, ಬೆಂಗಾಳಿ-ಹೈಮಂತಿ ಶುಕ್ಲಾ, ಒಡಿಶಾ-ಸುಭಾಷ್​​​​ ಚಂದ್ರ ದಾಸ್​​, ಹಿಂದಿ-ಚನ್ನು ಲಾಲ್ ಮಿಶ್ರ ಹಾಗೂ ಸಲಾಮತ್ ಖಾನ್​, ಹೀಗೆ ಆಯಾ ಭಾಷೆಗಳಲ್ಲಿ ಖ್ಯಾತರಾದ ಗಾಯಕರು ಈ ಹಾಡಿಗೆ ದನಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಸುರಾವ್ ಸಲುರಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜಿತ್ ನಾಗ್ ಈ ಹಾಡಿಗೆ ನಿರ್ದೇಶನ ಮಾಡಿದ್ದಾರೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಈ ಹಾಡನ್ನು ಚಿತ್ರೀಕರಿಸಲಾಗಿದ್ದು ಈ ಮೂಲಕ ಸಂಸ್ಕೃತಿ ಹಾಗೂ ಸಂಪ್ರದಾಯದ ಶ್ರೀಮಂತಿಕೆಯನ್ನು ಹಾಡಿನಲ್ಲಿ ತೋರಿಸಲಾಗಿದೆ.

Last Updated : Oct 2, 2019, 10:54 AM IST

ABOUT THE AUTHOR

...view details