200 ಪ್ರಯಾಣಿಕರಿದ್ದ ಎತಿಹಾದ್ ವಿಮಾನ ತುರ್ತು ಭೂಸ್ಪರ್ಶ - ಎತಿಹಾದ್ ವಿಮಾನ
ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಅಬು ಧಾಬಿಗೆ ಹೊರಟಿದ್ದ ಎತಿಹಾದ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ದೇವನಹಳ್ಳಿ: 200 ಪ್ರಯಾಣಿಕರನ್ನು ಹೊತ್ತು ದುಬೈಗೆ ಹೊರಟಿದ್ದ ಎತಿಹಾದ್ ಏರ್ ವೇಸ್ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಿಸಿದೆ. ಕಳೆದ ರಾತ್ರಿ 9.07 ಸಮಯದಲ್ಲಿ ಘಟನೆ ನಡೆದಿದೆ. ವಿಮಾನ ನಿಲ್ದಾಣದಿಂದ EY 237 ಸಂಖ್ಯೆಯ ಎತಿಹಾದ್ ವಿಮಾನ ಅಬು ಧಾಬಿಗೆ ಸಂಚಾರ ಬೆಳೆಸುತ್ತಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕ್ಯಾಬಿನ್ನಲ್ಲಿ ಒತ್ತಡ ಕಡಿಮೆಯಾಗಿದ್ದು ತುರ್ತು ಭೂಸ್ಪರ್ಶ ಮಾಡಿದೆ. ಘಟನೆಯಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ವಿಮಾನ 4 ಗಂಟೆ ತಡವಾಗಿ ಮರು ಪ್ರಯಾಣ ಬೆಳೆಸಿತು ಎಂದು ತಿಳಿದುಬಂದಿದೆ.