ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ಅಂತರವನ್ನು 4 ವಾರಗಳಿಗೆ ಪರಿಷ್ಕರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ನಿರ್ದೇಶನದಂತೆ ಈ ಕೆಳಕಂಡ ಗುಂಪುಗಳಿಗೆ 28 ದಿನಗಳನ್ನು ಪೂರೈಸಿದ ನಂತರ ನೀಡುವುದಾಗಿ ತಿಳಿಸಿರುತ್ತಾರೆ.
• ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು
• ನೌಕರಿಗಾಗಿ ವಿದೇಶಕ್ಕೆ ತೆರಳುವವರು
• ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ಗಾಗಿ ಟೋಕಿಯೋಗೆ ತೆರಳುವ ಆಟಗಾರರು
ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾರಣಕ್ಕಾಗಿ ಡಾ. ಸಂಘಮಿತ್ರ ಉಪ ಆರೋಗ್ಯಾಧಿಕಾರಿಯ ನಿಯೋಜನೆ ಮಾಡಿದ್ದು, ನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದ ಕ್ಯಾಂಪಸ್‌ನಲ್ಲಿ ಲಸಿಕೆ ಕೇಂದ್ರ ಸ್ಥಾಪಿಸಲಾಗಿದೆ. 22-6-2021 ರಂದು ಬೆಳಗ್ಗೆ 10-30 ರಿಂದ ಸಂಜೆ 4-30 ರವರೆಗೆ ಲಸಿಕೆ ಕಾರ್ಯ ನಡೆಯಲಿದೆ.
ಸದರಿ ಲಸಿಕೆ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳು ಒದಗಿಸುವ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ, 84 ದಿನಗಳಿಗೆ ಮೊದಲು, ಅಂದರೆ ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕಾಕರಣಕ್ಕಾಗಿ ಅನುಮತಿ ನೀಡುವುದು ರಾಜ್ಯವು ನೀಡಿರುವ ಮಾದರಿ ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ (Self Declaration Certificate) (ಅನುಬಂಧ -4 & 5) ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರವನ್ನು ನೀಡಲು ಹಾಗೂ ಸದರಿ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಸಿ ಲಸಿಕಾಕರಣ ನಡೆಸುವುದು ಹಾಗೂ ಆರೋಗ್ಯಾಧಿಕಾರಿ ಅಧೀನದಲ್ಲಿ ಕಾರ್ಯನಿರ್ವಹಿಸಲು ಹಾಗೂ ಸಂಪೂರ್ಣ ಅಂಕಿ ಅಂಶಗಳೊಂದಿಗೆ ಪ್ರತಿ ದಿನ ಮಾಹಿತಿಯನ್ನು ಆರೋಗ್ಯಾಧಿಕಾರಿಗೆ ಸಲ್ಲಿಸಲು ಸೂಚಿಸಲಾಗುತ್ತದೆ.