ಕರ್ನಾಟಕ

karnataka

ETV Bharat / state

170 ಎಕರೆಯಲ್ಲಿ ಬೆಂಗಳೂರು ಉತ್ತರ ವಿವಿ ಸ್ಥಾಪನೆ : ಡಿಸಿಎಂ ಅಶ್ವತ್ಥ್​ ನಾರಾಯಣ್

ಬೆಂಗಳೂರಿನಲ್ಲಿರುವ ಕ್ಷೇತ್ರಗಳಲ್ಲಿ ಮೂರು, ಐದು ಎಕರೆ ಜಾಗಗಳ ಮಾಹಿತಿ ಪಡೆಯುತ್ತೇವೆ. ರಾತ್ರೋರಾತ್ರಿ ಕಾಲೇಜು ಪ್ರಾರಂಭ ಮಾಡಲು ಸಾಧ್ಯವಾಗಲ್ಲ. ಹಂತ ಹಂತವಾಗಿ ಯುಜಿ, ಪಿಜಿ ಕಾಲೇಜುಗಳನ್ನು ಆರಂಭ ಮಾಡುತ್ತೇವೆ..

DCM Ashwathth Narayan
ಡಿಸಿಎಂ ಅಶ್ವತ್ಥ್​ ನಾರಾಯಣ್

By

Published : Feb 15, 2021, 4:55 PM IST

ಬೆಂಗಳೂರು :ಬೆಂಗಳೂರು ಉತ್ತರ ವಿವಿಗೆ 170 ಎಕರೆ ‌ನಿಗದಿ ಮಾಡಲಾಗಿತ್ತು. ಆದ್ರೆ, ಜಾಗ ಸಂಬಂಧ ಕೆಲವು ಸಮಸ್ಯೆಗಳಿದ್ದು, ಅದರ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಸಭೆ ನಡೆಸಿದ್ದೇನೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ್ ತಿಳಿಸಿದರು.

ಡಿಸಿಎಂ ಅಶ್ವತ್ಥ್​ ನಾರಾಯಣ್ ಪ್ರತಿಕ್ರಿಯೆ..

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 53 ಎಕರೆಯಲ್ಲಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ.

61 ಎಕರೆಯಲ್ಲಿ ಕೆಲವು ಸಮಸ್ಯೆಯಿದ್ದು, ಅದನ್ನ ಬಗೆಹರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಒಟ್ಟು 170 ಎಕರೆಯಲ್ಲಿ ಬೆಂಗಳೂರು ಉತ್ತರ ವಿವಿ ಜಂಗಮಕೋಟೆಯಲ್ಲಿ ಸ್ಥಾಪನೆ ಮಾಡುತ್ತೇವೆ ಎಂದರು.

ಒಂದೂವರೆ ಕೋಟಿ ಜನ ಬೆಂಗಳೂರಿನಲ್ಲಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಕಾಲೇಜುಗಳು ಸಾಲುತ್ತಿಲ್ಲ. ಯುಜಿ ಕಾಲೇಜುಗಳು ಕಡಿಮೆ ಇವೆ. ಹೀಗಾಗಿ, ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಕಾಲೇಜು ಆರಂಭ ಮಾಡುತ್ತೇವೆ.

ಬೆಂಗಳೂರಿನಲ್ಲಿರುವ ಜಮೀನುಗಳನ್ನ ಪಡೆದುಕೊಂಡು ಕಾಲೇಜು ಸ್ಥಾಪನೆ ಮಾಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಲೇಜು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಡಿ ಕಾಲೇಜುಗಳು ಪ್ರಾರಂಭ ಮಾಡಲಾಗುತ್ತದೆ.

ಬೆಂಗಳೂರಿನಲ್ಲಿರುವ ಕ್ಷೇತ್ರಗಳಲ್ಲಿ ಮೂರು, ಐದು ಎಕರೆ ಜಾಗಗಳ ಮಾಹಿತಿ ಪಡೆಯುತ್ತೇವೆ. ರಾತ್ರೋರಾತ್ರಿ ಕಾಲೇಜು ಪ್ರಾರಂಭ ಮಾಡಲು ಸಾಧ್ಯವಾಗಲ್ಲ. ಹಂತ ಹಂತವಾಗಿ ಯುಜಿ, ಪಿಜಿ ಕಾಲೇಜುಗಳನ್ನು ಆರಂಭ ಮಾಡುತ್ತೇವೆ ಎಂದು ಡಿಸಿಎಂ ಭರವಸೆ ನೀಡಿದರು.

ABOUT THE AUTHOR

...view details