ಕರ್ನಾಟಕ

karnataka

ETV Bharat / state

ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್​ ಬೊಮ್ಮಾಯಿ - ಬೆಂಗಳೂರು

ಫೆ.21 ರಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಈ ಸಂಬಂಧ ಪೊಲೀಸರು ಅಗತ್ಯ ಭದ್ರತೆ‌ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಸ್ಪಷ್ಟಪಡಿಸಿದರು.

Basavaraj Bommai
ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್​ ಬೊಮ್ಮಾಯಿ

By

Published : Feb 15, 2021, 1:49 PM IST

ಬೆಂಗಳೂರು: ಅರಮನೆ‌ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ ಸಂಬಂಧ ಪೊಲೀಸರು ಅಗತ್ಯ ಭದ್ರತೆ‌ ಕೈಗೊಳ್ಳುತ್ತಾರೆ. ಜನ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬಂದೋಬಸ್ತ್ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ತಿಳಿಸಿದರು.

ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್​ ಬೊಮ್ಮಾಯಿ

ಕಳೆದ ಒಂದೂವರೆ ವರ್ಷದಿಂದ ಹಲವಾರು ಹೋರಾಟಗಳು ನಡೆದಿವೆ. ನಮ್ಮ ಪೊಲೀಸರು ಇಂತಹ ಹೋರಾಟಗಳನ್ನು ಸಮಸ್ಯೆ‌ ಆಗದಂತೆ ನಿಭಾಯಿಸಿದ್ದಾರೆ. ಮೊನ್ನೆ ಹಾಲುಮತ ಸಮಾಜದವರು ಸಮಾವೇಶ ಮಾಡಿದ್ರು. ಫೆ.21 ರಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಪೊಲೀಸರು ದಕ್ಷತೆಯಿಂದ ಭದ್ರತೆಯನ್ನು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಹಳಷ್ಟು ಹೋರಾಟಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳು ಈ ಹೋರಾಟದ ಬಗ್ಗೆ ಮೈಸೂರು, ದಾವಣಗೆರೆಗಳಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗಳ ಬಳಿಕ ಎಲ್ಲವೂ ಸರಿಯಾಗಲಿದೆ ಎಂದರು.

ದೆಹಲಿ ರೈತ ಪ್ರತಿಭಟನೆಯ ಟೂಲ್‌ಕಿಟ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ದಿಶಾ ರವಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತವೆ. ಪ್ರೋಟೋಕಾಲ್ ಕೆಲವೊಂದರಲ್ಲಿ ಅನುಸರಿಸಲ್ಲ. ನಾವೂ ಸಹ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತೇವೆ. ದಿಶಾ ರವಿ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿತ್ತು. ಅಲ್ಲಿನ ಪೊಲೀಸರ ಬಳಿ ಕೆಲವು ಸಾಕ್ಷ್ಯಗಳಿದ್ದವು. ಪ್ರಕರಣ ಈಗ ದೆಹಲಿ ಕೋರ್ಟ್​ನಲ್ಲಿದೆ. ಹೀಗಾಗಿ ನಾನು ಈ ವಿಚಾರದಲ್ಲಿ ಹೆಚ್ಚಿಗೆ ಹೇಳಲಾರೆ ಎಂದು ಬೊಮ್ಮಾಯಿ ತಿಳಿಸಿದರು.

ಓದಿ: ಹೊರಟ್ಟಿ ಹಿರಿತನ, ಹೋರಾಟಕ್ಕೆ ಸಂದ ಗೌರವ; ಬಸವರಾಜ್​ ಬೊಮ್ಮಾಯಿ

ABOUT THE AUTHOR

...view details