ಕರ್ನಾಟಕ

karnataka

ETV Bharat / state

ಕೋವಿಡ್​ ಸೋಂಕಿತರು, ಸೋಂಕಿಲ್ಲದವರಿಗೆ ಇಲ್ಲಿದೆ ಅಗತ್ಯ ಮಾರ್ಗಸೂಚಿ - ಕೋವಿಡ್​ ಸೋಂಕಿತರಿಗೆ ಮಾರ್ಗಸೂಚಿ

ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವ ಕಾರಣ ಸಾರ್ವಜನಿಕರ ಗೊಂದಲಕ್ಕೆ ಸಿಲುಕಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕಿತ ಹಾಗೂ ಸೋಂಕಿಲ್ಲದ ವ್ಯಕ್ತಿಗಳು ಅನುಸರಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಬಿಡುಗಡೆ ಮಾಡಿದ್ದಾರೆ.

essential-guideline-for-covid-infected-non-infected-people
ಮಾರ್ಗಸೂಚಿ

By

Published : Jul 17, 2020, 2:30 AM IST

ಬೆಂಗಳೂರು:ಕೋವಿಡ್-19 ಸೋಂಕಿತ ಹಾಗೂ ಸೋಂಕಿಲ್ಲದ ವ್ಯಕ್ತಿಗಳ ಕೋವಿಡ್ ಪರೀಕ್ಷಾ ಫಲಿತಾಂಶದೊಂದಿಗೆ ನೀಡಬೇಕಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವ ಕಾರಣ ಸಾರ್ವಜನಿಕರ ಗೊಂದಲಕ್ಕೆ ಸಿಲುಕಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮನೋಸ್ಥೈರ್ಯ ತುಂಬುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕಿತ ಹಾಗೂ ಸೋಂಕಿಲ್ಲದ ವ್ಯಕ್ತಿಗಳು ಅನುಸರಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಬಿಡುಗಡೆ ಮಾಡಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ ರೋಗಿಗಳಿಗೆ ಸಲಹೆಗಳನ್ನು ನೀಡಲಾಗಿದೆ.

ಸುತ್ತೋಲೆ

ಕೋವಿಡ್ ಸೋಂಕಿಲ್ಲದ ವ್ಯಕ್ತಿಗಳು:

ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಆಪ್ತಮಿತ್ರ-14410ಗೆ ಕೂಡಲೇ ಕರೆ ಮಾಡುವುದು. ಅತ್ಯಾವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ, ಹೊರ ಹೋಗುವುದನ್ನು ನಿಲ್ಲಿಸಿ. ಹೊರ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ ಎಂದು ತಿಳಿಸಲಾಗಿದೆ.

ಕೋವಿಡ್-19 ಸೋಂಕಿತ ವ್ಯಕ್ತಿಗಳು:

ಉಸಿರಾಟ ತೊಂದರೆಯ ಲಕ್ಷಣಗಳು ಇದ್ದಲ್ಲಿ, ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ '108' ಗೆ ಕರೆ ಮಾಡಿ. ಯಾವುದೇ ಲಕ್ಷಣಗಳಿಲ್ಲದಿದ್ದಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ತಮ್ಮ ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಲು ಆದ್ಯತೆಯ ಮೇರೆಗೆ ಸರ್ಕಾರಿ ಅಧಿಕಾರಿಗಳು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಭಯಪಡಬೇಡಿ, ಸಮಾಧಾನವಾಗಿ, ಆತ್ಮವಿಶ್ವಾಸದಿಂದಿರಿ.

ಶೇ. 95ಕ್ಕಿಂತಲೂ ಹೆಚ್ಚು ಜನ ಗುಣಮುಖರಾಗಿದ್ದಾರೆ. ಅಗತ್ಯವಿದ್ದಾಗ ಸಹಾಯವನ್ನು ಪಡೆಯಿರಿ - ನೀವು ಒತ್ತಡದಲ್ಲಿದ್ದೀರಾ? ಆತಂಕಕ್ಕೊಳಗಾಗಿದ್ದರೆ, ಮನಸ್ಥಿತಿ ಸರಿಯಿಲ್ಲದಿದ್ದರೆ, ನಿದ್ರೆ ಹಾಗೂ ಹೊಟ್ಟೆಯಲ್ಲಿ ತೊಂದರೆಯಿದ್ದರೆ 104ಕ್ಕೆ ಕರೆ ಮಾಡಿ '4'ನ್ನು ಒತ್ತಿ. ಧನಾತ್ಮಕವಾಗಿದ್ದರೆ ಬೇಗ ಚೇತರಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details