ಬೆಂಗಳೂರು:ಸ್ಪೀಕರ್ ರಮೇಶ್ ಕುಮಾರ್ ಮತ್ತು ಮೈತ್ರಿ ನಾಯಕರು ಈಗಲೂ ನಾಳೆ ಸದನದಲ್ಲಿ ನಡೆಯುವ ವಿದ್ಯಮಾನವನ್ನು ಮುಂದೂಡಬಲ್ಲರೇ? ಎಂದು ಟ್ವೀಟ್ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾಲೆಳೆದಿದ್ದಾರೆ.
ಸದನದಲ್ಲಿ ಮತ್ತೆ ಚಂದ್ರಗುಪ್ತ ಮೌರ್ಯನಿಂದ ಇಲ್ಲಿನ ತನಕದ ಕಥೆ ಬೇಡ: ಕಾಲೆಳೆದ ಕೇಸರಿ ನಾಯಕರು - ಟ್ವೀಟ್
ಸ್ಪೀಕರ್ ರಮೇಶ್ ಕುಮಾರ್ ಮತ್ತು ಮೈತ್ರಿ ನಾಯಕರು ಈಗಲೂ ನಾಳೆ ನಡೆಯುವ ವಿದ್ಯಮಾನವನ್ನು ಮುಂದೂಡಬಲ್ಲರೇ ?ಎಂದು ಟ್ವೀಟ್ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾಲೆಳೆದಿದ್ದಾರೆ.
ಈಶ್ವರಪ್ಪ,ಬಿಎಲ್ ಸಂತೋಷ್
ಬಿಎಸ್ಪಿ ಶಾಸಕ ಎನ್. ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದು, ಮೈತ್ರಿ ಸರ್ಕಾರದ ಬಲ ಮತ್ತೆ ಕುಗ್ಗಿದೆ ಎಂದು ಸಂತೋಷ್ ವ್ಯಂಗ್ಯವಾಡಿದ್ದಾರೆ.
ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು. ಕಾಂಗ್ರೆಸ್ ಮತ್ತು ಜೆಡಿಎಸ್ನ ಎಲ್ಲಾ ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.