ಕರ್ನಾಟಕ

karnataka

ETV Bharat / state

91 ಕೋಟಿ ರೂ. ಅಕ್ರಮ ಆರೋಪ: ಬೀದರ್ ಡಿಸಿ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಈಶ್ವರ್​ ಖಂಡ್ರೆ - ಈಶ್ವರ ಖಂಡ್ರೆ ಲೇಟೆಸ್ಟ್​ ನ್ಯೂಸ್

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಬೀದರ್ ಜಿಲ್ಲಾಧಿಕಾರಿ, 91 ಕೋಟಿ ರೂ.ಗಳ ಅಕ್ರಮ ಆರೋಪ ಮಾಡಿ ನೋಟಿಸ್​ ಜಾರಿ ಮಾಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಖಂಡ್ರೆ, ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯಲ್ಲಿ ನನ್ನ ಹೆಸರು ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಜಿಲ್ಲಾಧಿಕಾರಿ ನನಗೆ ನೋಟಿಸ್ ನೀಡಿದ್ದಾರೆ. ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ಹುನ್ನಾರವಾಗಿದೆ. ಕೂಡಲೇ ಡಿಸಿ ಕ್ಷಮೆ ಕೇಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.

Eshwar Khandre
ಈಶ್ವರ ಖಂಡ್ರೆ

By

Published : May 24, 2020, 2:24 PM IST

ಬೆಂಗಳೂರು: ತಮ್ಮ ವಿರುದ್ಧ 91 ಕೋಟಿ ರೂ.ಗಳ ಅಕ್ರಮ ಆರೋಪ ಮಾಡಿರುವ ಬೀದರ್ ಜಿಲ್ಲಾಧಿಕಾರಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯಲ್ಲಿ ನನ್ನ ಹೆಸರು ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಜಿಲ್ಲಾಧಿಕಾರಿ ನನಗೆ ನೋಟಿಸ್ ನೀಡಿದ್ದಾರೆ. ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ಹುನ್ನಾರವಾಗಿದೆ. ಕೂಡಲೇ ಡಿಸಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಇದು ನಾನು ಅವರಿಗೆ ಕೊಡುತ್ತಿರುವ ನೇರ ಎಚ್ಚರಿಕೆ ಎಂದು ಹೇಳಿದ್ದಾರೆ.

ಈಶ್ವರ ಖಂಡ್ರೆ ಮಾಡಿರುವ ಟ್ವೀಟ್​

ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ 91 ಕೋಟಿ ಅಕ್ರಮದಲ್ಲಿ ಈಶ್ವರ್​ ಖಂಡ್ರೆ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹದೇವ್ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಖಂಡ್ರೆ ಜಿಲ್ಲಾಧಿಕಾರಿಯೇ ಇದಕ್ಕೆ ಹೊಣೆ ಎಂದಿದ್ದರು.

ಸದ್ಯ ಬೀದರ್ ಜಿಲ್ಲೆಯಲ್ಲಿ ಇದೇ ದೊಡ್ಡ ಸುದ್ದಿಯಾಗಿ ಮಾರ್ಪಟ್ಟಿದ್ದು, ರಾಜಕೀಯವಾಗಿ ತಮ್ಮನ್ನು ಮುಗಿಸಲು ತಮ್ಮ ವಿರುದ್ಧ ವೈಯಕ್ತಿಕ ಮತ್ತು ರಾಜಕೀಯ ದ್ವೇಷದ ಷಡ್ಯಂತ್ರದಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2015-16 ರಿಂದ 2018-19ರ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳ ಮಂಜೂರಾತಿಯಲ್ಲಿ ನಿಯಮ ಉಲ್ಲಂಘಿಸಿ 91 ಕೋಟಿ ರೂಪಾಯಿಗಳ ಅಕ್ರಮ ನಡೆಸಲಾಗಿದೆ ಎನ್ನುವುದಾದರೆ, ಅದಕ್ಕೆ ಜಿಲ್ಲಾಧಿಕಾರಿಗಳಾದ ಮಹದೇವ್ ಸಂಪೂರ್ಣ ಹೊಣೆಗಾರರು. ಇಷ್ಟೊಂದು ಹಣ ಎಲ್ಲಿ ಹೋಯಿತು, ಯಾರ ಖಾತೆಗೆ ಹೋಯಿತು ಎಂಬ ಲೆಕ್ಕವನ್ನು ಅವರು ಜನತೆಗೆ ನೀಡಬೇಕಾಗುತ್ತದೆ ಎಂದು ಖಂಡ್ರೆ ಆಗ್ರಹಿಸಿದ್ದಾರೆ.

ಇದೀಗ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಈಶ್ವರ ಖಂಡ್ರೆ, ಕಾನೂನು ಹೋರಾಟದ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ABOUT THE AUTHOR

...view details