ಕರ್ನಾಟಕ

karnataka

ETV Bharat / state

ವಾರ್ ರೂಂ ಅವ್ಯವಹಾರದಲ್ಲಿರುವ ದಿಗ್ಗಜರ ಹೆಸರು ಬಹಿರಂಗಪಡಿಸಿ: ಸಂಸದರಿಗೆ ಈಶ್ವರ್ ಖಂಡ್ರೆ ಒತ್ತಾಯ - ಬಿಬಿಎಂಪಿ ವಾರ್​ ರೂಮ್​ ಅವ್ಯವಹಾರ ಪ್ರಕರಣ ಕುರಿತು ಈಶ್ವರ್​ ಖಂಡ್ರೆ ಟ್ವೀಟ್​

ಬಿಬಿಎಂಪಿ ವಾರ್​ ರೂಮ್​ ಅವ್ಯವಹಾರ ಪ್ರಕರಣ ಸಂಬಂಧ ಸರಣಿ ಟ್ವೀಟ್​ ಮಾಡಿರುವ ಈಶ್ವರ್​ ಖಂಡ್ರೆ, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಮತ್ತಷ್ಟು ಜನರ ಹೆಸರನ್ನು ಬಹಿರಂಗ ಪಡಿಸಿ ಎಂದು ಸಂಸದ ತೇಜಸ್ವಿ ಸೂರ್ಯಗೆ ಆಗ್ರಹಿಸಿದ್ದಾರೆ.

khandre
khandre

By

Published : May 5, 2021, 4:12 PM IST

ಬೆಂಗಳೂರು: ಬಿಬಿಎಂಪಿ ವಾರ್ ರೂಂ ಅವ್ಯವಹಾರ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ ಅವರು, ಇದರಲ್ಲಿ ಭಾಗಿಯಾಗಿರುವ ಇನ್ನಷ್ಟು ದಿಗ್ಗಜರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಸಂಸದರನ್ನ ಒತ್ತಾಯಿಸಿರುವ ಅವರು, ಸಂಸದ ತೇಜಸ್ವಿ ಸೂರ್ಯ ಅವರೇ ಬಿಬಿಎಂಪಿ ವಾರ್ ರೂಂ ಅವ್ಯವಹಾರ ಬಯಲು ಮಾಡಿದ್ದಾರೆ. ಅವರಿಗೆ ಅಭಿನಂದನೆ. ಅಂದ ಹಾಗೆ ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ 7 ಸಚಿವರು ಮತ್ತು ಒಬ್ಬ ರಾಜಕೀಯ ಕಾರ್ಯದರ್ಶಿ ಸೇರಿ ಅಷ್ಟ ದಿಗ್ಗಜರಿಗೆ ಹೊಣೆ ನೀಡಲಾಗಿತ್ತಲ್ಲ. ಈ ಅವ್ಯವಹಾರದಲ್ಲಿ ಅವರ ಪಾತ್ರ –ಪಾಲು ಎಷ್ಟು ಎಂಬುದನ್ನೂ ಬಹಿರಂಗಪಡಿಸಿ. ರಾಜ್ಯದಲ್ಲಿ ರೆಮ್ಡೆಸಿವಿರ್ ಮತ್ತು ಆಕ್ಸಿಜನ್ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ.
ರೆಮ್ಡೆಸಿವಿರ್ ನಕಲಿ ಔಷಧ ಜಾಲವೂ ಹುಟ್ಟಿಕೊಂಡಿದೆ. ಇದರ ಹಿಂದೆ ಆಳುವ ಪಕ್ಷದ ಯಾರ ಯಾರ ಕುಮ್ಮಕ್ಕು ಇದೆ ಎಂಬುದನ್ನೂ ತೇಜಸ್ವಿ ಸೂರ್ಯ ಬಹಿರಂಗ ಪಡಿಸುವರೇ? ಎಂದು ಕೇಳಿದ್ದಾರೆ.

ರಾಜ್ಯದಲ್ಲಿ 1041 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಆಗತ್ತೆ. ಆದರೆ ಕೇಂದ್ರ ರಾಜ್ಯಕ್ಕೆ 815 ಮೆಟ್ರಿಕ್ ಟನ್ ಮಂಜೂರು ಮಾಡುತ್ತದೆ. ರಾಜ್ಯಕ್ಕೆ ಅಗತ್ಯ ಇರುವುದು 1700 ಮೆಟ್ರಿಕ್ ಟನ್ ಆಕ್ಸಿಜನ್. ಇದು ತೇಜಸ್ವಿ ಸೂರ್ಯ ಕಣ್ಣಿಗೆ ಕಾಣುತ್ತಿಲ್ಲವೇ?. ಮಾಧ್ಯಮಗಳ ಮುಂದೆ ಜೋರಾಗಿ ಮಾತನಾಡುವ ಇವರಿಗೆ ಪ್ರಧಾನಿ ಮುಂದೆ ಮಾತನಾಡಲು ನಾಲಿಗೆ ಸತ್ತು ಹೋಗಿದೆಯೇ? ಜನ ಪ್ರಾಣವಾಯು ಸಿಗದೇ ನಿತ್ಯ ಸಾಯುತ್ತಿದ್ದಾರೆ. ಕೋರ್ಟ್ ಕೂಡ ಛಾಟಿ ಬೀಸಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಸೇರಿದಂತೆ 25 ಸಂಸದರ ಧ್ವನಿ ಏಕೆ ಅಡಗಿ ಹೋಗಿದೆಯೇ ಉತ್ತರ ನೀಡಿ. ಕೇಂದ್ರದ ಗುಲಾಮಗಿರಿ, ಕಪಟ ನಾಟಕ ಬಿಟ್ಟು ರಾಜ್ಯದ ಜನರ ಪ್ರಾಣ ಉಳಿಸಲು ಕೇಂದ್ರದ ಮೇಲೆ ಒತ್ತಡ ಹೇರಿ ಎಂದಿದ್ದಾರೆ.

ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ನಗರ ಶಾಸಕರಾದ ಸತೀಶ್ ರೆಡ್ಡಿ ಮತ್ತು ಉದಯ್ ಗರುಡಾಚಾರ್ ಸೇರಿದಂತೆ ಹಲವು ನಾಯಕರು ಬಿಬಿಎಂಪಿ ವಾರ್ ರೂಮ್ ಅವ್ಯವಹಾರವನ್ನು ಬಯಲಿಗೆಳೆದಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಂಸದ ತೇಜಸ್ವಿ ಸೂರ್ಯ ಅವರನ್ನು ಈ ಪ್ರಕರಣದಲ್ಲಿ ಭಾಗಿಯಾಗಿರುವ ದೊಡ್ಡ ನಾಯಕರ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದಾರೆ. ಹಲವು ಕಾಂಗ್ರೆಸ್ ನಾಯಕರ ಒತ್ತಡಕ್ಕೆ ತೇಜಸ್ವಿ ಸೂರ್ಯ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details