ಕರ್ನಾಟಕ

karnataka

ETV Bharat / state

ಎಂ.ಎಸ್ ಧೋನಿ ಸಾಧನೆ ಕೊಂಡಾಡಿ ಟ್ವೀಟ್​ ಮಾಡಿದ ಈಶ್ವರ್​​ ಖಂಡ್ರೆ! - ಧೋನಿ ನಿವೃತ್ತಿ

ಟೀಂ ಇಂಡಿಯಾ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ.

Eshwar khandre
Eshwar khandre

By

Published : Aug 16, 2020, 12:40 AM IST

ಬೆಂಗಳೂರು:ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್ ಧೋನಿ ಸಾಧನೆ ಕೊಂಡಾಡಿರುವ ಕಾಂಗ್ರೆಸ್​​ ಮುಖಂಡ ಈಶ್ವರ್​ ಖಂಡ್ರೆ ಟ್ವೀಟ್​ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್​ ಮಾಡಿದ್ದು, ಮಹೇಂದ್ರ ಸಿಂಗ್ ಧೋನಿ ಅವರೇ ಕ್ರಿಕೆಟ್ ಅಂಗಳದಿಂದ ನಿಮ್ಮ ನಿವೃತ್ತಿ ಘೋಷಣೆ ನಮ್ಮೆಲ್ಲರ ಮನದ ಅಂಗಳವನ್ನೂ ಖಾಲಿಯಾಗಿಸಿದೆ. ನೀವು ಕ್ರಿಕೆಟ್ ಜಗತ್ತಿಗೆ ಕೊಟ್ಟಿರುವ ಕೊಡುಗೆ ಅನನ್ಯ ಮತ್ತು ಅಪಾರ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖಂಡಿತವಾಗಿಯೂ ನಿಮ್ಮನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಸಾಕಷ್ಟು ಯೋಚಿಸಿಯೇ ನೀವು ಈ ನಿವೃತ್ತಿ ಪ್ರಕಟಿಸಿದ್ದರೂ ಅಭಿಮಾನಿಗಳಿಗಾಗಿ ಇನ್ನೊಮ್ಮೆ ಯೋಚಿಸಿ. ಶುಭವಾಗಲಿ ಎಂದು ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಎಸ್ ಧೋನಿ ವಿದಾಯ ಹೇಳುತ್ತಿದ್ದಂತೆ ವಿವಿಧ ಕ್ಷೇತ್ರದ ಗಣ್ಯರು ಕ್ರಿಕೆಟ್​ ಕ್ಷೇತ್ರಕ್ಕೆ ಧೋನಿ ಕೊಡುಗೆ ಕೊಂಡಾಡಿ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details