ಬೆಂಗಳೂರು:ಕೊರೊನಾ ಸೋಂಕಿಗೆ ತುತ್ತಾದ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾರೈಸಿದ್ದಾರೆ.
ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ ಶೀಘ್ರ ಗುಣಮುಖರಾಗಲಿ: ಈಶ್ವರ್ ಖಂಡ್ರೆ ಹಾರೈಕೆ - ಎಸ್.ಎಸ್ ಮಲ್ಲಿಕಾರ್ಜುನಗೆ ಕೊರೊನಾ ಸೋಂಕು
ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾರೈಸಿದ್ದಾರೆ.
![ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ ಶೀಘ್ರ ಗುಣಮುಖರಾಗಲಿ: ಈಶ್ವರ್ ಖಂಡ್ರೆ ಹಾರೈಕೆ Eshwar khandre](https://etvbharatimages.akamaized.net/etvbharat/prod-images/768-512-8351229-668-8351229-1596953045402.jpg)
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಖಿಲ ಭಾರತ ವೀರಶೈವ ಮಾಹಾಸಭಾ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರ ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎನ್. ಮಲ್ಲಿಕಾರ್ಜುನ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದುಃಖದ ವಿಚಾರ. ಇಬ್ಬರು ಶೀಘ್ರ ಗುಣಮುಖರಾಗಿ ಎಂದಿನಂತೆ ಜನ ಸೇವೆಯಲ್ಲಿ ಭಾಗಿಯಾಗಲಿ ಎಂದು ಗುರು ಬಸವಣ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮೊದಲು ಪುತ್ರ ಮಲ್ಲಿಕಾರ್ಜುನ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆ ಕುಟುಂಬ ಸದಸ್ಯರನ್ನು ತಪಾಸಣೆಗೆ ಒಳಪಡಿಸಿದಾಗ ಶನಿವಾರ ಶಾಮನೂರು ಶಿವಶಂಕರಪ್ಪ ಅವರಿಗೂ ಕೊರೊನಾ ದೃಢಪಟ್ಟಿದೆ. ಸದ್ಯ ಅವರು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 90 ವರ್ಷ ಪ್ರಾಯದ ಶಾಮನೂರು ಶಿವಶಂಕರಪ್ಪ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ದೃಢಪಡಿಸಬೇಕಿಗಿದೆ.