ಬೆಂಗಳೂರು: ಜೂನ್ ತಿಂಗಳು ಬಂತಂದ್ರೆ ಸಾಕು, ಪ್ರತಿಯೊಬ್ಬರ ಸ್ಟೇಟಸ್ನಲ್ಲೂ ಪರಿಸರ ಜಾಗೃತಿ ಮೂಡಿರುತ್ತೆ. ಆದ್ರೆ ನಗರದ ಒಂದು ತಂಡ ಮಾತ್ರ ಪರಿಸರ ಜಾಗೃತಿಗೆ ಯಾವತ್ತೂ ಸಮಯವನ್ನು ಮೀಸಲಿಟ್ಟಿದೆ. ತಮ್ಮ ಪ್ರಭಾವಿ ಪೇಂಟಿಂಗ್ ಮೂಲಕ ಜನರಲ್ಲಿ ಪರಿಸರದ ಅರಿವು ಮೂಡಿಸುತ್ತಿದೆ.
ಕುಂಚದ ಮೂಲಕ ಪರಿಸರ ಜಾಗೃತಿ... ಪ್ರಕೃತಿ ಉಳಿಸಲು ಅರಿವಿನ ಅಭಿಯಾನ - undefined
ಬೆಂಗಳೂರಿನ ಆರ್ಟ್ ಮಾಸ್ಟರ್ ವಿದ್ಯಾರ್ಥಿಗಳು ಗಿಡ ನೆಟ್ಟು ಪರಿಸರ ರಕ್ಷಿಸಿ ಎಂದು ಪೇಂಟಿಂಗ್ ಮೂಲಕ ವಿಭಿನ್ನವಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ತಮ್ಮ ಕುಂಚದ ಮೂಲಕ ಪರಿಸರ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಜೂ.5 ವಿಶ್ವ ಪರಿಸರ ದಿನವಾದ್ದರಿಂದ ಪರಿಸರದ ಮೇಲೆ ಕಾಳಜಿ ಇರುವ ಆರ್ಟ್ ಮಾಸ್ಟರ್ ಟೀಂ ನ ವಿದ್ಯಾರ್ಥಿಗಳು ನಗರದ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ಸ್ಟೇಷನ್ ಬಳಿ ಪರಿಸರ ಜಾಗೃತಿ ಮೂಡಿಸುವಂತ ಪೇಂಟಿಂಗ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದರು. ಒಂದು ಕಡೆ ಸ್ವಚ್ಛ ಪರಿಸರ ಚಿತ್ರ, ಮತ್ತೊಂದೆಡೆ ಸೀಡ್ ಬಾಲ್, ಇನ್ನೊಂದೆಡೆ ಪ್ಲಾಸ್ಟಿಕ್ ಬಿಟ್ಟು ಪರಿಸಕ್ಕೆ ಹತ್ತಿರವಾದ ಬ್ಯಾಗ್ಗಳನ್ನ ಬಳಸಿ ಅನ್ನುವ ಸಂದೇಶ ಸಾರಿದರು. ಹಾಗೇ ಅಡಿಕೆ ಎಲೆಯಲ್ಲಿ ಕಲರ್ಫುಲ್ ಆಗಿ ಮೂಡಿ ಬಂದಿರುವ ಪ್ರಕೃತಿ ಚಿತ್ರಗಳು. ಆರ್ಟ್ ಮಾಸ್ಟರ್ ಸಂಸ್ಥೆಯ ವಿದ್ಯಾರ್ಥಿಗಳು ಇದೆಲ್ಲವನ್ನು ಸಿಲಿಕಾನ್ ಸಿಟಿ ಮಂದಿಗೆ ತೋರಿಸುವುದರ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಇದರಲ್ಲಿ ಮಕ್ಕಳು ಸಹ ಭಾಗವಹಿಸಿ, ಪರಿಸರ ಚಿತ್ರಗಳ ಬಿಡಿಸಿ ಎಲ್ಲರ ಗಮನ ಸೆಳೆದರು. ಸಾರ್ವಜನಿಕರೇ ಪರಿಸರವನ್ನ ಕಡೆಗಣಿಸಿ ಮೆಲ್ಲಗೆ ಪ್ರಕೃತಿಯಿಂದ ದೂರವಾಗುತ್ತಿದ್ದಾರೆ ಅನ್ನೋ ಥೀಮ್ನಲ್ಲಿ ವಿದ್ಯಾರ್ಥಿಗಳು ವಿಭಿನ್ನ ಚಿತ್ರಗಳನ್ನ ಬಿಡಿಸಿದ್ರು.
ಪರಿಸರದ ಉಳಿವಿಗಾಗಿ ಒಂದು ದಿನವನ್ನಾದರೂ ಮೀಸಲಿಡಿ, ಮರಗಳನ್ನ ಬೆಳೆಸಿ, ಪ್ಲಾಸ್ಟಿಕ್ ಬಿಟ್ಟಾಕಿ ಅಂತಾ ಸೀಡ್ ಬಾಲ್ಗಳನ್ನ ಜನರಿಗೆ ಪೇಪರ್ ಕವರ್ನಲ್ಲಿ ಹಾಕಿ ಕೊಟ್ಟು ವಿದ್ಯಾರ್ಥಿಗಳು ವಿಭಿನ್ನ ಅಭಿಯಾನ ನಡೆಸಿದ್ರು. ಮಾತ್ರ ಪರಿಸರ ದಿನಾಚರಣೆಯಲ್ಲ ಪ್ರತಿದಿನ ಪರಿಸರ ದಿನ ಎಂದುಕೊಂಡು ಮನೆಗೊಂದು ಮರ ನೆಟ್ಟು ಮುಂದಿನ ಪೀಳಿಗೆಗೆ ಪರಿಸರವನ್ನು ಜೀವಂತವಾಗಿರಿಸೋಣ.