ಕರ್ನಾಟಕ

karnataka

ETV Bharat / state

ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶ: ಮಹಿಳೆಯ ವಿರುದ್ಧ ಪ್ರಕರಣ

ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸಿದ್ದ ಮಹಿಳೆಯ ವಿರುದ್ದ ಪ್ರಕರಣ ದಾಖಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

By ETV Bharat Karnataka Team

Published : Nov 27, 2023, 3:16 PM IST

ದೇವನಹಳ್ಳಿ : ಸ್ನೇಹಿತೆಯನ್ನ ಡ್ರಾಪ್ ಮಾಡಲು ಬಂದಿದ್ದ ಮಹಿಳೆ ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸಿದ್ದರು. ಹೀಗಾಗಿ ಆ ಮಹಿಳೆ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.

ಹರ್ಪಿತ್ ಕೌರ್ ಸೈನಿ ಎಂಬ ಮಹಿಳೆಯ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 26 ರಂದು ರಾಂಚಿಗೆ ಪ್ರಯಾಣಿಸುತ್ತಿದ್ದ ತನ್ನ ಸ್ನೇಹಿತೆಯನ್ನು ಡ್ರಾಪ್ ಮಾಡಲು ಮಹಿಳೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಡಿಪಾರ್ಚರ್​ ಗೇಟ್​ನಲ್ಲಿ ಅವರು ಇ ಟಿಕೆಟ್ ಅನ್ನು ತೋರಿಸಿ ಟರ್ಮಿನಲ್ ಪ್ರವೇಶಿಸಿದ್ದರು.

ವಿಮಾನ ನಿಲ್ದಾಣದ PTBವರೆಗೂ ಹೋಗಿದ್ದ ಅವರು, ಸಿಟಿಸೈಡ್​ನಲ್ಲಿ ಲ್ಯಾಪ್​ಟಾಪ್ ಇಟ್ಟು ಮರೆತು ಬಂದಿದ್ರು. ಲ್ಯಾಪ್ ಟಾಪ್ ತೆಗೆದುಕೊಂಡು ಬರಲು ಬಂದಾಗ ಇಂಡಿಗೋ ಸಿಬ್ಬಂದಿ ಚೆಕ್​ಇನ್ ಕೌಂಟರ್​ನಲ್ಲಿ ಪರಿಶೀಲನೆ ಮಾಡಿದ್ದಾಗ ನಕಲಿ ಟಿಕೆಟ್ ಅನ್ನುವುದು ಗೊತ್ತಾಗಿದೆ. ತನ್ನ ಸ್ನೇಹಿತೆಯನ್ನು PESC ವರೆಗೂ ಬಿಟ್ಟು ಬರಲು ಟಿಕೆಟ್ ಅನ್ನು ಎಡಿಟ್ ಮಾಡಿಕೊಂಡು ಬಂದಿದ್ದರು. ಮಹಿಳೆ ವಿರುದ್ಧ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ಚಿನ್ನ ಸಾಗಣೆ, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ: ಚಾಕುವಿನ ಹಿಡಿಕೆಯೊಳಗೆ ಟೊಳ್ಳಾದ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮ ಸಾಗಣೆ ಮಾಡುತ್ತಿದ್ದ ದುಬೈನಿಂದ ಬಂದಿದ್ದ ಪ್ರಯಾಣಿಕನೊಬ್ಬನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ (ನವೆಂಬರ್ 25-2023) ಸಿಕ್ಕಿಬಿದ್ದಿದ್ದ.

ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 6E-1486 ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಚಾಕುವಿನ ಹಿಡಿಕೆಯೊಳಗೆ ಟೊಳ್ಳಾದ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟಿರುವುದು ಕಂಡು ಬಂದಿತ್ತು.

ಪ್ರಯಾಣಿಕನನ್ನು ವಶಕ್ಕೆ ಪಡೆದು 298.25 ಗ್ರಾಂ ಚಿನ್ನ ಜಪ್ತಿ ಮಾಡಲಾಗಿತ್ತು. ಇದೇ ವಿಮಾನದಲ್ಲಿ ಮತ್ತೊಂದು ಪ್ರಕರಣದಲ್ಲಿ ಚಿನ್ನ ಲೇಪಿತ ಕಾಗದವನ್ನು ಟ್ರೇ ಮತ್ತು ಬೋರ್ಡ್​​ನಲ್ಲಿ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣವೂ ಬೆಳಕಿಗೆ ಬಂದಿತ್ತು.

ಸೊಂಟದ ಪಟ್ಟಿಯಲ್ಲಿ ಚಿನ್ನ ಸಾಗಣೆ( ಬೆಂಗಳೂರು) :ಸೊಂಟದ ಪಟ್ಟಿಯಲ್ಲಿ ಮರೆಮಾಚಿ ಇನ್ಸೂಲೇಷನ್ ಟೇಪ್​​ನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಕಳೆದ ಸೆಪ್ಟೆಂಬರ್​ನಲ್ಲಿ ಸಿಕ್ಕಿಬಿದ್ದಿದ್ದರು. ಸೆಪ್ಟೆಂಬರ್ 9ರ ರಾತ್ರಿ ದುಬೈನಿಂದ ಇಕೆ564 ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ಈ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಚಾಕುವಿನ ಹಿಡಿಕೆಯೊಳಗೆ ಅಡಗಿಸಿಟ್ಟು ಚಿನ್ನ ಸಾಗಣೆ, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ

ABOUT THE AUTHOR

...view details