ಕರ್ನಾಟಕ

karnataka

ETV Bharat / state

ಜೆಎಜಿ ಹುದ್ದೆಗೆ ಪ್ರವೇಶ ಪರೀಕ್ಷೆಗೆ ಕಡ್ಡಾಯಗೊಳಿಸಿದ್ದ ಅರ್ಜಿ ಹಿಂಪಡೆದ ಕಾನೂನು ವಿದ್ಯಾರ್ಥಿ - ETV Bharath Karnataka

ಜೆಎಜಿ ವಿಭಾಗದ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ.

hc
ಹೈಕೋರ್ಟ್​

By

Published : Dec 3, 2022, 7:39 AM IST

ಬೆಂಗಳೂರು: ಭಾರತೀಯ ಸೇನೆಯ ನ್ಯಾಯಾಧೀಶರ ಅಡ್ವೊಕೇಟ್ ಜನರಲ್ (ಜೆಎಜಿ) ವಿಭಾಗದ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್ಎಟಿ) ಕಡ್ಡಾಯಗೊಳಿಸಿ ಹೊರಡಿಸಿದ್ದ ಅಧಿಸೂಚನೆನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕಾನೂನು ವಿದ್ಯಾರ್ಥಿ ಪುರ್ಬಾಯಾನ್​ ಚಕ್ರಬೂರ್ಟಿ ಹಿಂಪಡೆದಿದ್ದಾರೆ.

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ನೇಮಕಾತಿ ಸಂಸ್ಥೆಯು ಅಭ್ಯರ್ಥಿಗಳು ನಿರ್ದಿಷ್ಟ ಅರ್ಹತೆ ಹೊಂದಿರಬೇಕು ಎಂದು ಹೇಳುವಾಗ ನ್ಯಾಯಾಲಯವು ಆ ನಿರ್ಧಾರವನ್ನು ತಿರಸ್ಕರಿಸಲಾಗದು ಎಂದು ಪೀಠ ಮೌಖಿಕವಾಗಿ ತಿಳಿಸಿತು.

ಅರ್ಜಿದಾರ ಪರ ವಕೀಲರು, ಭಾರತೀಯ ಸೇನೆಯ ನ್ಯಾಯಾಧೀಶರ ಅಡ್ವೊಕೇಟ್ ಜನರಲ್ ವಿಭಾಗದ ಅಧಿಕಾರಿ ಹುದ್ದೆಗೆ ವಿಧಿಸಲಾಗಿರುವ ಷರತ್ತು, ಕಡಿಮೆ ಶುಲ್ಕ ಪಾವತಿಸಿ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ವಿದ್ಯಾರ್ಥಿಗಳು ದುಬಾರಿಯಾದ 4,000 ರೂಪಾಯಿ ಪಾವತಿಸಿ ಸಿಎಲ್‌ಎಟಿ ಪರೀಕ್ಷೆ ಬರೆಯುವಷ್ಟು ಆರ್ಥಿಕವಾಗಿ ಶಕ್ತಿವಂತರಾಗಿಲ್ಲ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಅಹವಾಲನ್ನು ಸೂಕ್ತ ಪ್ರಾಧಿಕಾರದ ಮುಂದೆ ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಸಿಎಲ್‌ಎಟಿಗೆ ಅರ್ಜಿ ಸಲ್ಲಿಸುವುದಿಲ್ಲವೇ ಎಂದು ಮೌಖಿಕವಾಗಿ ಪ್ರಶ್ನಿಸಿತು. ಈ ವೇಳೆ, ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ:ರಾಜ್ಯದಲ್ಲಿ 3,368 ಆಂಬ್ಯುಲೆನ್ಸ್​ಗಳಿಗೆ ಜಿಪಿಎಸ್​ ಅಳವಡಿಕೆ: ಹೈಕೋರ್ಟ್

ABOUT THE AUTHOR

...view details