ಕರ್ನಾಟಕ

karnataka

ETV Bharat / state

ನಕಲಿ ಅಂಕಪಟ್ಟಿ ನೀಡಿ ಪದವಿಗೆ ದಾಖಲು: ಬೆಂಗಳೂರು ವಿವಿಯಲ್ಲಿ ಎಂಟು ವಿದ್ಯಾರ್ಥಿಗಳು ಪತ್ತೆ

ವಿಶ್ವವಿದ್ಯಾಲಯದಲ್ಲಿ ದಾಖಲಾತಿಗಳ ಪರಿಶೀಲನೆ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ.

Bangalore North University
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

By

Published : Nov 5, 2022, 4:30 PM IST

Updated : Nov 5, 2022, 5:00 PM IST

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿ ಪದವಿಗೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಸದ್ಯ ಪತ್ತೆಯಾಗಿದ್ದಾರೆ. ವಿವಿಯಿಂದ ಪರಿಶೀಲನೆ ವೇಳೆ ಎಂಟು ವಿದ್ಯಾರ್ಥಿಗಳ ನಕಲಿ ಅಂಕ ಪಟ್ಟಿ ಪತ್ತೆಯಾಗಿದೆ. ನಕಲಿ ಅಂಕಪಟ್ಟಿ ಜಾಲ ತಲೆ ಎತ್ತಿದೆಯಾ ಎನ್ನುವ ಹತ್ತು ಹಲವು ಅನುಮಾನಗಳು ಇದೀಗ ಮೂಡಿವೆ.

ವಿಶ್ವವಿದ್ಯಾಲಯದಲ್ಲಿ ದಾಖಲಾತಿಗಳ ಪರಿಶೀಲನೆ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ. ಸುಮಾರು ಎಂಟು ನಕಲಿ ವಿದ್ಯಾರ್ಥಿಗಳ ಮೇಲೆ ತೂಗುಕತ್ತಿ ಎದುರಾಗಿದ್ದು, ಮತ್ತಷ್ಟು ಎಂದರೆ ನೂರಕ್ಕು ಹೆಚ್ಚು ನಕಲಿ ಅಂಕಪಟ್ಟಿಗಳು ಸಿಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ವಿಶ್ವವಿದ್ಯಾಲಯದಿಂದ ಲಭ್ಯವಾಗಿದೆ.

ದೇವನಹಳ್ಳಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ನೆರೆ ರಾಜ್ಯಗಳಿಂದಲೂ ನಕಲಿ ಅಂಕಪಟ್ಟಿ ಪ್ರಕರಣ ಬಯಲಾಗಿದ್ದು, ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚಾಗಿ ಕಂಡು ಬಂದಿವೆ. ಖಾಸಗಿಯವರು ಹಣದಾಸೆಗೆ ಇಷ್ಟೆಲ್ಲಾ ನಕಲಿ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ನೂರಕ್ಕೂ ಹೆಚ್ಚು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ ಹೆಚ್ಚಾಗಿದ್ದು, ವ್ಯಾಸಂಗ ಮಾಡಿದ ಕಾಲೇಜು ಶಾಲೆಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಆದೇಶ ನೀಡಲಾಗಿದೆ.

ರಾಜ್ಯದಲ್ಲಿ ನಕಲಿ ಅಂಕಪಟ್ಟಿ ಕೊಡುವ ಜಾಲ ಹಬ್ಬಿದೆಯಾ ಎಂಬ ಅನುಮಾಗಳು ಮೂಡಿವೆ. ಉತ್ತರ ವಿವಿ ಕುಲಪತಿ ನಿರಂಜನ್ ವಾನಳ್ಳಿ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ:ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Last Updated : Nov 5, 2022, 5:00 PM IST

ABOUT THE AUTHOR

...view details