ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿ ಅನುಮಾನಾಸ್ಫದ ಸಾವು ಪ್ರಕರಣ... ಮಹಿಳಾ ಆಯೋಗದಿಂದ ಸುಮೋಟೊ ಕೇಸ್ ದಾಖಲು - ರಾಜ್ಯ ಮಹಿಳಾ ಆಯೋಗ

ಮಹಿಳೆಯರ ವಿಚಾರದಲ್ಲಿ ಏನೇ ತೊಂದರೆಯಾದರು ರಾಜ್ಯ ಮಹಿಳಾ ಆಯೋಗ ಧ್ವನಿ ಎತ್ತಿ ಅದಕ್ಕೆ ತಾರ್ಕಿಕ ಅಂತ್ಯ‌ ಹಾಡಲು ಪ್ರಯತ್ನ ಮಾಡುತ್ತೆ. ಅದೇ ರೀತಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಫದ ಸಾವು ಪ್ರಕರಣವನ್ನು ಅಧ್ಯಕ್ಷೆ ನಾಗಲಕ್ಷೀಬಾಯಿ ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮಹಿಳಾ ಆಯೋಗ

By

Published : Apr 20, 2019, 3:38 PM IST

ಬೆಂಗಳೂರು:ರಾಯಚೂರು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನುಮಾನಸ್ಫದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ಸುಮೋಟೊ ಕೇಸ್ ದಾಖಲಿಸಿಕೊಂಡು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ.

ವಿದ್ಯಾರ್ಥಿನಿ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಮೊದಲು ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಸಮರ್ಥನೆ ನೀಡಿದ್ರು. ನಂತರ ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಹೀಗಾಗಿ ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿ ಎಂಬ ಹ್ಯಾಷ್ ಟ್ಯಾಗ್​ನೊಂದಿಗೆ ಹೋರಾಟದ ಕಿಚ್ಚು ಹೊತ್ತಿಸಿದ್ದಾರೆ.

ಮಹಿಳೆಯರ ವಿಚಾರದಲ್ಲಿ ಏನೇ ತೊಂದರೆಯಾದರು ರಾಜ್ಯ ಮಹಿಳಾ ಆಯೋಗ ಧ್ವನಿ ಎತ್ತಿ ಇದಕ್ಕೆ ತಾರ್ಕಿಕ ಅಂತ್ಯ‌ ಹಾಡಲು ಪ್ರಯತ್ನ ಮಾಡುತ್ತೆ. ಅದೇ ರೀತಿ ಈ ಪ್ರಕರಣವನ್ನು ಅಧ್ಯಕ್ಷೆ ನಾಗಲಕ್ಷೀಬಾಯಿ ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ರಾಯಚೂರಿನ ಸಂತ್ರಸ್ತೆ ಏಪ್ರಿಲ್ 13 ರಂದು ಕಾಲೇಜಿಗೆ ಹೋಗಿ ವಾಪಸ್ಸು ಬಂದಿರಲಿಲ್ಲ. ನಂತರ ಏಪ್ರಿಲ್ 15ರಂದು ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಇದೀಗ ಈ ಸಾವಿಗೆ ನ್ಯಾಯ ಒದಗಿಸುವಂತೆ ಎಲ್ಲರೂ ಕೇಳಿಕೊಳ್ಳುತ್ತಿದ್ದಾರೆ.

ABOUT THE AUTHOR

...view details